ಪ್ರಜಾಸ್ತ್ರ ಸುದ್ದಿ
ಬೀಜಿಂಗ್(Beijin): ಚೀನಾದಲ್ಲಿ ಮತ್ತೊಂದು ಭಯಾನಕ ಸೋಂಕು ಕಾಣಿಸಿಕೊಂಡಿದೆ. ಕೋವಿಡ್ 19 ರೀತಿ ಹೋಲುವ ಹೆಚ್ಎಂಪಿವಿ(ಹ್ಯೂಮನ್ ಮೆಟಾನ್ಯೂಮೊವೈರಸ್(HMPV virus)ಎಲ್ಲೆಡೆ ವ್ಯಾಪಾಕವಾಗಿ ಹರಡುತ್ತಿದೆಯಂತೆ. ಇದರಿಂದ ಬಳಲುತ್ತಿರುವ ಸಂಖ್ಯೆ ಹೆಚ್ಚಾಗಿದ್ದು, ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆಯಂತೆ.
ಕೋವಿಡ್-19(Covid-19) ಮಾದರಿಯ ಲಕ್ಷಣಗಳನ್ನು ಇದು ಸಹ ಹೊಂದಿದ್ದು, ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಅಲ್ಲದೆ ಎಲ್ಲ ವಯೋಮಾನದವರಲ್ಲಿಯೂ ಇದು ಕಾಣಿಸಿಕೊಳ್ಳುತ್ತಿದೆಯಂತೆ. ಕೆಲ ತಜ್ಞರು ಇದು ಇದ್ದು ಅದಾಗಲೇ 60 ವರ್ಷಗಳಾಗಿವೆ. 2001ರಲ್ಲಿ ಈ ವೈರಾಣು ಮೊದಲ ಬಾರಿಗೆ ಪತ್ತೆಯಾಗಿದೆಯಂತೆ. ಒಟ್ಟಿನಲ್ಲಿ ಚೀನಾದಿಂದ ಒಂದಲ್ಲ ಒಂದು ವೈರಸ್ ಮೂಲಕ ಜಗತ್ತನ್ನು ಕಾಡುವಂತಾಗುತ್ತಿದೆ.