Ad imageAd image

ಫೈನಲ್ ಗೆ ಫೋಗೆಟ್.. ಭಾರತಕ್ಕೆ ಮತ್ತೊಂದು ಪದಕ ಫಿಕ್ಸ್

ಒಲಿಂಪಿಕ್ಸ್-2024ರ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಕುಸ್ತಿಪಟು ವಿನೀಶಾ ಫೋಗೆಟ್ ಐತಿಹಾಸಿಕ ಸಾಧನೆಗೆ ಇನ್ನೊಂದು ಹೆಜ್ಜೆ ಉಳಿದಿದೆ. 50 ಕೆಜಿ ಮಹಿಳೆಯರ ವಿಭಾಗದಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ವಿರುದ್ಧ

Nagesh Talawar
ಫೈನಲ್ ಗೆ ಫೋಗೆಟ್.. ಭಾರತಕ್ಕೆ ಮತ್ತೊಂದು ಪದಕ ಫಿಕ್ಸ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಪ್ಯಾರಿಸ್(Paris): ಒಲಿಂಪಿಕ್ಸ್-2024ರ(Olympics-2024) ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಕುಸ್ತಿಪಟು(Wrestler) ವಿನೀಶಾ ಫೋಗೆಟ್ ಐತಿಹಾಸಿಕ ಸಾಧನೆಗೆ ಇನ್ನೊಂದು ಹೆಜ್ಜೆ ಉಳಿದಿದೆ. 50 ಕೆಜಿ ಮಹಿಳೆಯರ ವಿಭಾಗದಲ್ಲಿ ಕ್ಯೂಬಾದ(Cuba) ಯುಸ್ನೆಲಿಸ್ ಗುಜ್ಮನ್(Yusneylis Guzman) ವಿರುದ್ಧ ಭರ್ಜರಿ 5-0 ಅಂತರದಿಂದ ಗೆಲುವು ದಾಖಲಿಸಿ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ. ಇಲ್ಲಿ ಅವರಿಗೆ ಗೆಲುವು ಸಿಕ್ಕರೆ ಚಿನ್ನಕ್ಕೆ ಮುತ್ತಿಕ್ಕಲಿದ್ದಾರೆ. ಈ ಮೂಲಕ ಐತಿಹಾಸಿಕ ದಾಖಲೆ ಬರೆಯಲಿದ್ದಾರೆ.

ವಿಶ್ವದ ನಂಬರ್ 1, ನಾಲ್ಕು ಬಾರಿ ವಿಶ್ವ ಚಾಂಪಿಯನ್ ಹಾಗೂ ಸೋಲನ್ನೇ ಕಾಣದ ಚಿನ್ನದ ಪದಕ ವಿಜೇತ ಜಪಾನಿನ ಯುಸಿ ಸುಸಾಕಿ ಅವರನ್ನು ಸೋಲಿಸುವ ಮೂಲಕ ಇತಿಹಾಸ ನಿರ್ಮಿಸಿರುವ ವಿನೀಶಾ ಫೋಗೆಟ್ ಈಗ ಫೈನಲ್ ಪ್ರವೇಶಿಸಿದ್ದು, ಒಲಿಂಪಿಕ್ಸ್ ನಲ್ಲಿ ಫೈನಲ್ ತಲುಪಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಆಗಿದ್ದಾರೆ. ಈಗ ಭಾರತೀಯರೆಲ್ಲರ ಪ್ರಾರ್ಥನೆ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತರಲಿ ಎನ್ನುವುದಾಗಿದೆ.

ಸಾಕಷ್ಟು ನೋವು, ಅವಮಾನ, ಹೋರಾಟದ ಮೂಲಕ ವಿನೀಶಾ ಫೋಗೆಟ್(vinesha phogat) ತಮ್ಮನ್ನ ತಾವು ಏನು ಅನ್ನೋದು ಸಾಬೀತು ಮಾಡಿದ್ದಾರೆ. ಭಾರತದ ಕುಸ್ತಿ ಫೆಡರೇಷನ್ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ದೌರ್ಜನ್ಯದ ಗಂಭೀರ ಆರೋಪವಿದ್ದರೂ ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ರಾಷ್ಟ್ರ ರಾಜಧಾನಿಯಲ್ಲಿ ತಿಂಗಳಕಾಲ ಹೋರಾಟ ಮಾಡಿದರು. ಸಾಕಷ್ಟು ನಿಂದನೆಗಳನ್ನು ಅನುಭವಿಸಿದರು. ಇತರೆ ಕ್ರೀಡಾಪಟುಗಳಿಂದ ಯಾವ ಬೆಂಬಲವೂ ಸಿಗಲಿಲ್ಲ. ಇದೆಲ್ಲವನ್ನು ಎದುರಿಸಿ ಚಿನ್ನವನ್ನು ಕೊರಳಿಗೆ ಹಾಕಿಕೊಳ್ಳಲು ಸಜ್ಜಾಗಿದ್ದು, ವಿನೀಶಾ ಫೋಗೆಟ್ ಚಿನ್ನದ ಹುಡುಗಿ ಆಗಿ ಹೊರ ಹೊಮ್ಮಲಿ ಎನ್ನುವುದು ಎಲ್ಲರ ಆಶಯ.

WhatsApp Group Join Now
Telegram Group Join Now
Share This Article