ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಜಮ್ಮು ಕಾಶ್ಮೀರದಲ್ಲಿ ಮಂಗಳವಾರ ನಡೆದ ಭಯೋತ್ಪಾದಕರ ದಾಳಿಯಲ್ಲಿ 28 ಜನರು ಮೃತಪಟ್ಟಿದ್ದಾರೆ. ಇದರಲ್ಲಿ ಪ್ರವಾಸಕ್ಕೆ ಹೋದವರೆ ಸಂಖ್ಯೆಯೇ ಹೆಚ್ಚಿದೆ. ಕರ್ನಾಟಕದ ಇಬ್ಬರು ಮೃತಪಟ್ಟಿದ್ದರು ಎಂದು ಈ ಮೊದಲು ತಿಳಿದು ಬಂದಿತ್ತು. ಇದೀಗ ಮತ್ತೊಬ್ಬರು ಮೃತಪಟ್ಟಿದ್ದಾರೆ ಅನ್ನೋ ಮಾಹಿತಿ ಬಂದಿದೆ. ಇದರೊಂದಿಗೆ ರಾಜ್ಯದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರಿನ ರಾಮಮೂರ್ತಿ ನಗರದ ಮಧುಸೂದನ್ ಮೃತ ದುರ್ದೈವಿ.
ಮೂಲತಃ ಆಂಧ್ರಪ್ರದೇಶದವರಾದ ಮಧುಸೂದನ್ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ರಾಮಮೂರ್ತಿ ನಗರದಲ್ಲಿ ಸ್ವಂತ ಮನೆ ಕಟ್ಟಿಕೊಂಡು ಪತ್ನಿ, ಮಕ್ಕಳೊಂದಿಗೆ ವಾಸವಾಗಿದ್ದರು. ಸ್ನೇಹಿತರೊಂದಿಗೆ ಭಾನುವಾರ ಜಮ್ಮು ಕಾಶ್ಮೀರಕ್ಕೆ ತೆರಳಿದ್ದರು. ಮಂಗಳವಾರ ಬೆಳಗ್ಗೆಯಷ್ಟೇ ಪುಹಲ್ಗಾಮ್ ತಲುಪಿದ್ದರು. ಮಧ್ಯಾಹ್ನ ಉಗ್ರರ ದಾಳಿ ನಡೆದಿದೆ. ಪತ್ನಿ, ಮಕ್ಕಳು, ಸ್ನೇಹಿತರು ತಿಂಡಲು ತರಲು ಹೋಗಿದ್ದರು. ಇವರು ಹುಲ್ಲಿನ ಮೇಲೆ ಕುಳಿತಿದ್ದಾಗ ಇವರ ಮೇಲೆ ದಾಳಿಯಾಗಿದೆ.