ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಚಿತ್ರದ 3ನೇ ಹಾಡು ಬಿಡುಗಡೆಗೆ ಸಿದ್ಧವಾಗಿದೆ. ನವೆಂಬರ್ 16ರಂದು ಹೊಸ ಹಾಡಿಗೆ ಸಜ್ಜಾಗಿ ಎಂದು ನಟ ದರ್ಶನ್ ಎಕ್ಸ್ ಖಾತೆ ಹಾಗೂ ಶ್ರೀ ಜೈಮಾತಾ ಕಂಬೈನ್ಸ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಕೊಲೆ ಆರೋಪದ ಮೇಲೆ ಜೈಲು ಸೇರಿರುವ ನಟ ದರ್ಶನ್, ಡೆವಿಲ್ ಚಿತ್ರದ ಕೆಲಸವನ್ನು ನಿಲ್ಲಿಸದಂತೆ ಸಿನಿ ತಂಡಕ್ಕೆ ಹೇಳಿದ್ದು, ಸದ್ದಿಲ್ಲದೆ ಕೆಲಸಗಳು ಭರದಿಂದ ಸಾಗಿವೆ.
ನವೆಂಬರ್ 16 ಮಧ್ಯಾಹ್ನ 12.3ಕ್ಕೆ ಹೊಸ ಹಾಡು ಬಿಡುಗಡೆಯಾಗಲಿದೆ. ಇನ್ನು ನಟಿ ರಚಿತಾ ರಾಮ್ ಸಹ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಮಿಲನ ಪ್ರಕಾಶ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ನಟಿಯರಾದ ರಚನಾ ರೈ, ಶರ್ಮಿಳಾ ಮಾಂಡ್ರೆ ಸೇರಿದಂತೆ ಅನೇಕರು ನಟಿಸಿದ್ದಾರೆ. ಡಿಸೆಂಬರ್ 12ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.




