ಪ್ರಜಾಸ್ತ್ರ ಸುದ್ದಿ
ಹಾವೇರಿ(Haveri): ಇತ್ತೀಚೆಗಷ್ಟೇ ಆನೇಕಲ್ ಹತ್ತಿರ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 6 ಜನರು ಮೃತಪಟ್ಟ ಘಟನೆ ನಡುವೆಯೇ ಮತ್ತೊಂದು ದುರಂತ ನಡೆದಿದೆ. ಶಿಗ್ಗಾವಿಯ ತಿಮ್ಮಾಪುರ ಗ್ರಾಮದ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.
ಇನ್ನೊಂದು ಕಾರಿನಲ್ಲಿದ್ದ ಚಾಲಕ ಹಾಗೂ ಇತರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬೆಂಗಳೂರಿನ ಚಂದ್ರಮ್ಮ(59), ಇವರ ಮಗಳು ದಾವಣಗೆರೆಯ ಹರಿಹರದ ಮೀನಾ(38), ಧನ್ವೀರ್(11) ಹಾಗೂ ಕಾರು ಚಾಲಕ ಮಹೇಶಕುಮಾರ್.ಸಿ(41) ಮೃತ ದುರ್ದೈವಿಗಳು. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅತಿ ವೇಗವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.