Ad imageAd image

ಮತ್ತೊಂದು ದುರಂತ: ಹೆಲಿಕಾಪ್ಟರ್ ಪತನ, 7 ಜನರ ಸಾವು

Nagesh Talawar
ಮತ್ತೊಂದು ದುರಂತ: ಹೆಲಿಕಾಪ್ಟರ್ ಪತನ, 7 ಜನರ ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಉತ್ತರಾಖಂಡ(Uttarakhand): ಏರ್ ಇಂಡಿಯಾ ವಿಮಾನ ಅಪಘಾತವಾಗಿ 270ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ದುರಂತದ ನಡುವೆ ಕೇದರನಾಥದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಇದರಲ್ಲಿದ್ದ 7 ಜನರು ಮೃತಪಟ್ಟಿದ್ದಾರೆ. ಹಿಮಾಲಯದ ಮಡಿಲಿನಲ್ಲಿರುವ ಪ್ರಸಿದ್ಧ ಕೇದರನಾಥ ದೇವಸ್ಥಾನದ ಹತ್ತಿರ ಹೆಲಿಕಾಪ್ಟರ್ ಪತನವಾಗಿದೆ. ಪೈಲೆಟ್ ಸೇರಿ 7 ಜನರು ಮೃತಪಟ್ಟಿದ್ದಾರೆ.

ಗೌರಿಕುಂಡದ ಹತ್ತಿರ ಅಪಘಾತಗೊಂಡ ಸ್ಥಳದಲ್ಲಿ ಎನ್ ಡಿಆರ್ ಎಫ್ ತಂಡ ಕಾರ್ಯಾಚರಣೆ ನಡೆಸಿದೆ. ಮೃತದೇಹಗಳನ್ನು ಸಾಗಿಸಲಾಗುತ್ತಿದೆ. ಕೇದರನಾಥದಿಂದ ಗುಪ್ತ ಕಾಶಿ ಕಡೆ ಪ್ರಯಾಣ ಬೆಳೆಸಿತ್ತು. ಈ ಘಟನೆ ಏನು ಕಾರಣ, ಹೆಲಿಕಾಪ್ಟರ್ ಯಾವ ರೀತಿಯಾಗಿ ಪತನಗೊಂಡಿತು ಅನ್ನೋದರ ತನಿಖೆ ನಡೆಯುತ್ತಿದೆ. ಕಳೆದ 6 ವಾರಗಳಲ್ಲಿ 5 ಹೆಲಿಕಾಪ್ಟರ್ ಅಪಘಾತಗಳು ಇಲ್ಲಿ ನಡೆದಿವೆ.

WhatsApp Group Join Now
Telegram Group Join Now
Share This Article