ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಆಕಸ್ಮಿಕವಾಗಿ ಎಲ್ಒಸಿ ಶೂನ್ಯ ರೇಖೆಯನ್ನು ದಾಟಿ ಹೋಗಿದ್ದ ಬಿಎಸ್ಎಫ್ ಯೋಧ ಪೂರ್ಣಂ ಕುಮಾರ್ ಶಾನನ್ನು ಪಾಕಿಸ್ತಾನ ಬುಧವಾರ ಬಿಡುಗಡೆ ಮಾಡಿದೆ. ಈ ಮೂಲಕ ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಏಪ್ರಿಲ್ 22ರಂದು ಫಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿದ್ದರು. ಏಪ್ರಿಲ್ 23ರಂದು ಭಾರತ-ಪಾಕ್ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಫಿರೋಜ್ ಪುರ ಸೆಕ್ಟರ್ ನಲ್ಲಿ ಆಕಸ್ಮಿಕವಾಗಿ ಗಡಿ ದಾಟಿ ಹೋಗಿದ್ದರು. ಆಗ ಪಾಕಿಸ್ತಾನದ ರೇಂಜರ್ ಗಳು ಅವರನ್ನು ಬಂಧಿಸಿದ್ದರು.
ಇದರ ನಡುವೆ ಯುದ್ಧದ ಬೆಳವಣಿಗೆಗಳು ನಡೆದವು. ಭಾರತ ಆಪರೇಷನ್ ಸಿಂಧೂರ ಮೂಲಕ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿದವು. ಹೀಗಾಗಿ ಬಿಎಸ್ಎಫ್ ಯೋಧ ಪೂರ್ಣಂ ಕುಮಾರ್ ಅವರನ್ನು ಹೇಗಾದರೂ ಮಾಡಿ ವಾಪಸ್ ಕರೆಸಿಕೊಳ್ಳುವ ಸವಾಲು ಸಹ ಭಾರತದ ಮುಂದೆ ಇತ್ತು. ಅದು ಇದೀಗ ಯಶಸ್ವಿಯಾಗಿದ್ದು, ಬುಧವಾರ ಯೋಧನನ್ನು ಬಿಡುಗಡೆ ಮಾಡಲಾಗಿದೆ ಎಂದು ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ.