Ad imageAd image

ಜನವಿರೋಧಿ, ಯು ಟರ್ನ್ ಸರ್ಕಾರ: ಸಂಸದ ಬೊಮ್ಮಾಯಿ

ಮುಡಾದಿಂದ ಅಕ್ರಮವಾಗಿ ನಿವೇಶನ ಪಡೆದಿಲ್ಲ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊನೆಗೆ ವಾಪಸ್ ನೀಡಿದರು. ಈಗ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿದ್ದಾರೆ.

Nagesh Talawar
ಜನವಿರೋಧಿ, ಯು ಟರ್ನ್ ಸರ್ಕಾರ: ಸಂಸದ ಬೊಮ್ಮಾಯಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಮುಡಾದಿಂದ ಅಕ್ರಮವಾಗಿ ನಿವೇಶನ ಪಡೆದಿಲ್ಲ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊನೆಗೆ ವಾಪಸ್ ನೀಡಿದರು. ಈಗ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿದ್ದಾರೆ. ಇವರು ಅನ್ನಭಾಗ್ಯ ಕೊಡುತ್ತಿಲ್ಲ. ಅನ್ನ ಕಿತ್ತುಕೊಳ್ಳುತ್ತಿದ್ದಾರೆ. ಇದೊಂದು ಜನವಿರೋಧಿ, ಯು ಟರ್ನ್ ಸರ್ಕಾರ ಎಂದು ಬಿಜೆಪಿ ಸಂಸದ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದರು. ಬಿಪಿಎಲ್ ಕಾರ್ಡ್ ರದ್ದಾದ ಕುಟುಂಬಗಳನ್ನು ಗುರುವಾರ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಭೇಟಿ ಮಾಡಿ ಮಾತನಾಡಿದರು.

ಪುಟ್ಟೇನ್ ಪಾಳ್ಯ ಹಾಗೂ ಜಯನಗರದ ಅರಸು ಕಾಲೋನಿಯಲ್ಲಿ ಜನರನ್ನು ಭೇಟಿಯಾಗಿ ಅವರಿಂದ ಮಾಹಿತಿ ಪಡೆದರು. ಬಿಪಿಎಲ್ ಕಾರ್ಡ್ ರದ್ದಾದರೆ ಬರೀ ರೇಷನ್ ಮಾತ್ರವಲ್ಲ ಆಸ್ಪತ್ರೆ, ಔಷಧಿ ಸೇರಿದಂತೆ ಅನೇಕ ಸೌಲಭ್ಯಗಳು ಬಂದ್ ಆಗುತ್ತವೆ. ಇದನ್ನು ವಿರೋಧಿಸಿದ ಮೇಲೆ ಈಗ ವಾಪಸ್ ಪಡೆಯುವ ಬಗ್ಗೆ ಹೇಳುತ್ತಾರೆ. ಮತ್ತೆ ಅರ್ಜಿ ಹಾಕಬೇಕು ಅಂತಾರೆ. ಈ ರೀತಿ ಮಾಡಿದರೆ ಈ ಸರ್ಕಾರ ಹೆಚ್ಚು ದಿನ ಇರಲ್ಲ. ಕೇಂದ್ರ ಸರ್ಕಾರದ ಮಾನದಂಡದ ಮೂಲಕ ರದ್ದು ಮಾಡಲಾಗುತ್ತಿದೆ ಅಂತಾರೆ. ಕರ್ನಾಟಕ ಬಿಟ್ಟರೆ ಬೇರೆ ರಾಜ್ಯದಲ್ಲಿ ಎಲ್ಲಿ ರದ್ದಾಗಿದೆ ತೋರಿಸಲಿ ಎಂದು ಸವಾಲು ಹಾಕಿದರು.

ಕೊಳಗೇರಿಯಲ್ಲಿ ವಾಸಿಸಲು ಆಗದ ಜಾಗದಲ್ಲಿ ಏಳು ಜನರು ವಾಸವಾಗಿದ್ದಾರೆ. ಇಂತಹ ಜನರ ಪಡಿತರ ಚೀಟಿ ರದ್ದಾಗಿದೆ. ಇವರು ಟ್ಯಾಕ್ಸ್ ಕಟ್ಟುವವರಾ ಎಂದು ಪ್ರಶ್ನಿಸಿದರು. ಇವರಿಗೆ ಜನರ ಕಷ್ಟ ಅರ್ಥವಾಗುತ್ತಿಲ್ಲ. ಕಾರ್ಡ್ ರದ್ದಾದವರು ಮತ್ತೆ ಅರ್ಜಿ ಹಾಕಿದ್ರೆ ಕಾರ್ಡ್ ಬರುವುದು ಯಾವಾಗ? ಅಲ್ಲಿ ತನಕ ಏನು ತಿನ್ನಬೇಕು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕುಟುಕಿದರು.

WhatsApp Group Join Now
Telegram Group Join Now
Share This Article