ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಜಿಲ್ಲೆಯ ರೈತರ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶದ ಉತ್ತರ ಪ್ರಾಂತ, ಬೆಳಗಾವಿ ಘಟಕದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ರಂಗರಾಜನ್ ಕಮಿಟಿ ವರದಿ ಪ್ರಕಾರ ಕಬ್ಬಿನ ಉಪಉತ್ಪನ್ನಗಳ ಲಾಭಾಂಶದಲ್ಲಿ ಶೇ.30 ಕಾರ್ಖಾನೆಗಳಿಗೆ ಮತ್ತು ಶೇ.70 ರೈತರಿಗೆ ನೀಡುವಂತಾಗಬೇಕು. ಕಬ್ಬಿಣ ತೂಕದಲ್ಲಾಗುವ ಮೊಸ ತಪ್ಪಿಸಲು ಕಾರ್ಖಾನೆಗಳ ಹೊರಗೆ ತೂಕದ ಯಂತ್ರಗಳನ್ನು ಅಳವಡಿಸುವುದು. ಭಾರತದ ಕೆಲವೊಂದು ರಾಜ್ಯಗಳು ಪ್ರೋತ್ಸಾಹ ನೀಡುವಂತೆ ನಮ್ಮ ರಾಜ್ಯ ಸರಕಾರವು ಪ್ರತಿ ಟನ್ ಕಬ್ಬಿಗೆ ಒಂದು ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಬೇಕು ಎಂದು ಕೇಳಲಾಗಿದೆ.
ಗೋವಿನಜೋಳ ಬೆಳೆದ ರೈತರು ಸರ್ಕಾರದ ವಿಳಂಬ ನೀತಿಯಿಂದಾಗಿ ಗೋವಿನಜೋಳ ಖರೀದಿ ಕೇಂದ್ರ ಪ್ರಾರಂಭಿಸದ ಪರಿಣಾಮ ಕ್ವಿಂಟಲಗೆ 1700-1800 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಖರೀದಿ ಕೇಂದ್ರಗಳನ್ನು ಪ್ರತಿ ತಾಲೂಕಿನಲ್ಲಿ 4 ಸ್ಥಳಗಳಲ್ಲಿ ಪ್ರಾರಂಭಿಸಿ ಬೆಂಬಲ ಬೆಲೆಯಲ್ಲಿ ಖರೀದಿಸುವುದು. ಕಡಲೆ ಹಾಗೂ ಜೋಳ ಶೀಘ್ರದಲ್ಲಿ ಕಟಾವಿಗೆ ಬಂದಿದ್ದು ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವ ವ್ಯವಸ್ಥೆ ಮಾಡುವುದು.
ಭೂ ಮಾಪನ ಇಲಾಖೆಯಲ್ಲಿ ಭೂ ಸರ್ವೆಯಂತ್ರಗಳು ಸರ್ಕಾರದ ಅಧೀನದಲ್ಲಿಟ್ಟಕೊಂಡು ರೈತರ ಜಮೀನುಗಳನ್ನು ಸರ್ವೆ ಮಾಡಬೇಕು. 2025-26ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಉಂಟಾದ ಬೆಳೆಗಳಿಗೆ ಪರಿಹಾರ ಸಮರ್ಪಕವಾಗಿ ಎಲ್ಲಾ ರೈತರಿಗೆ ದೂರೆಯಬೇಕು. ಬೆಳೆ ವಿಮಾ ಪರಿಹಾರದಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ಸೂಕ್ತ ಪರಿಹಾರ ನೀಡುವ ವ್ಯವಸ್ಥೆ ಕಲ್ಪಿಸಬೇಕು. ಗ್ರಾಮ ಪಂಚಾಯತ ಕಾರ್ಯಾಲಯ, ನಗರ ಸಭೆ ಕಾರ್ಯಾಲಯಗಳಲ್ಲಿ ಇ-ಖಾತಾ ನೀಡಲು ವಿಳಂಭಕ್ಕೆ ಕಾರಣವಾದ ಸಿಬ್ಬಂದಿ ಮೆಲೆ ಕ್ರಮ ಜರುಗಿಸಬೇಕು ಅನ್ನೋದು ಸೇರಿದಂತೆ 23 ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಮುಂದೆ ಇಟ್ಟಿದ್ದಾರೆ. ಈ ಸಂದರ್ಭದಲ್ಲಿ ಬೆಳಗಾವಿ ಹಾಗೂ ಚಿಕ್ಕೋಡಿ ಭಾಗದ ಜಿಲ್ಲಾ ಪದಾಧಿಕಾರಿಗಳು, ತಾಲೂಕಾ ಪದಾಧಿಕಾರಿಗಳು ಹಾಗೂ ಕರ್ನಾಟಕ ಉತ್ತರ ಪ್ರಾಂತ ಪದಾಧಿಕಾರಿಗಳಾದ ಪ್ರಾಂತ ಅಧ್ಯಕ್ಷ ವಿವೇಕ್ ಮೋರೆ ಹಾಗೂ ಪ್ರಾಂತ ಉಪಾಧ್ಯಕ್ಷ ಜಯಪಾಲ ನಾಗನೂರ್, ಪ್ರಾಂತ ಸಹ ಕಾರ್ಯದರ್ಶಿ ಶಿವಲಿಂಗಪ್ಪಾ ಗಾಣಿಗೇರ ಉಪಸ್ಥಿತರಿದ್ದರು.




