ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಭಾರತ ಹಾಗೂ ಪಾಕಿಸ್ತಾನ ನಡುವೆ ಇದೀಗ ಸಂಘರ್ಷ ಶುರುವಾಗಿದೆ. ಈ ಬಗ್ಗೆ ನೇರ(Live News) ವರದಿ ಮಾಡದಂತೆ ಭಾರತೀಯ ಸೇನೆ ಹಾಗೂ ಕೇಂದ್ರ ಸರ್ಕಾರ ಮನವಿ ಮಾಡಿದೆ. ಲೈವ್ ವರದಿ ಮಾಡುವುದರಿಂದ ಯೋಧರ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿದೆ. ಅಲ್ಲದೆ ಭದ್ರತಾ ಕಾರ್ಯಾಚರಣೆಗೂ ಸಮಸ್ಯೆಯಾಗಲಿದೆ. ಹೀಗಾಗಿ ಲೈವ್ ವರದಿ ಮಾಡದಂತೆ ದೃಶ್ಯ ಮಾಧ್ಯಮಗಳು, ಡಿಜಿಟಲ್ ಮಾಧ್ಯಮಗಳಿಗೆ ಮನವಿ ಮಾಡಲಾಗಿದೆ.
ಸೂಕ್ಷ್ಮ ಮಾಹಿತಿಯನ್ನು ಪ್ರಸಾರ ಮಾಡುವುದರಿಂದ ಕಾರ್ಯಾಚರಣೆಗೆ ತೊಂದರೆಯಾಗಲಿದೆ. ಸೇನಾ ಪಡೆಯ ಜೀವಕ್ಕೂ ಅಪಾಯವಾಗಲಿದೆ. ಯಾಕಂದ್ರೆ ಕಾರ್ಗಿಲ್ ಯುದ್ಧ, 26/11ರ ದಾಳಿಯ ಹಾಗೂ ಕಂದಹಾರ ಅಪಹರಣದ ನೇರ ಪ್ರಸಾರದಿಂದ ಆದ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ರಾಷ್ಟ್ರದ ಸೇವೆ ಹಾಗೂ ಭದ್ರತೆ ದೃಷ್ಟಿಯಿಂದ ಮಾಧ್ಯಮಗಳು ಜವಾಬ್ದಾರಿ ಹಾಗೂ ಸೂಕ್ಷ್ಮತೆ ಕಾಪಾಡಬೇಕು ಎಂದು ಹೇಳಲಾಗಿದೆ.