Ad imageAd image

ಪ್ರಥಮ ಮುದ್ರಣ ಪುಸ್ತಕ ಆಯ್ಕೆಗೆ ಅರ್ಜಿ ಆಹ್ವಾನ

2024ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ವಿವಿಧ ಪುಸ್ತಕಗಳ ಆಯ್ಕೆಗಾಗಿ ಲೇಖಕ, ಲೇಖಕ-ಪ್ರಕಾಶಕರು ಹಾಗೂ ಪುಸ್ತಕ ಮಾರಾಟಗಾರರಿಂದ ರಾಜ್ಯಮಟ್ಟದ ಪುಸ್ತಕ

Nagesh Talawar
ಪ್ರಥಮ ಮುದ್ರಣ ಪುಸ್ತಕ ಆಯ್ಕೆಗೆ ಅರ್ಜಿ ಆಹ್ವಾನ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): 2024ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ವಿವಿಧ ಪುಸ್ತಕಗಳ ಆಯ್ಕೆಗಾಗಿ ಲೇಖಕ, ಲೇಖಕ-ಪ್ರಕಾಶಕರು ಹಾಗೂ ಪುಸ್ತಕ ಮಾರಾಟಗಾರರಿಂದ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಹಿತ್ಯ, ಮಕ್ಕಳ ಸಾಹಿತ್ಯ, ಕಲೆ ಮತ್ತು ವಿಜ್ಞಾನ ಪ್ರಕಾರಗಳ ಯಾವುದೇ ಭಾಷೆಯ ಪುಸ್ತಕಗಳನ್ನು ಹಾಗೂ ಸ್ಪರ್ಧಾತ್ಮಕ, ಪಠ್ಯ, ಪರಾಮರ್ಶನ, ಸಾಂದರ್ಭಿಕ ಮತ್ತು ಅಭಿನಂದನ ಗ್ರಂಥಗಳನ್ನು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಅರ್ಜಿ ಸಲ್ಲಿಸಬಹುದು.

2024ರಲ್ಲಿ ಕರ್ನಾಟಕದಲ್ಲಿ ಪ್ರಥಮವಾಗಿ ಮುದ್ರಣಗೊಂಡು ಪ್ರಕಟಗೊಳ್ಳುವ ಯಾವುದೇ ಭಾಷೆಯ ಪುಸ್ತಕಗಳನ್ನು ಉಪನಿರ್ದೇಶಕರ ಕಚೇರಿ ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ಜನವರಿ 1, 2025ರ ಸಂಜೆ 5.30ರೊಳಗಾಗಿ ನೋಂದಣಿ ಮಾಡಿಸುವುದು ಹಾಗೂ ಈ ಪುಸ್ತಕಗಳನ್ನು ಮಾತ್ರ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಗಾಗಿ ಪರಿಗಣಿಸಲಾಗುವುದು.

ನೋಂದಣಿ ಪ್ರಮಾಣ ಪತ್ರದ ನಕಲು ಪತ್ರದ ಪ್ರತಿಯೊಂದಿಗೆ ಮತ್ತು ಸದರಿ ಪುಸ್ತಕದ  ಪ್ರತಿಯನ್ನು ಜನವರಿ 2, 2025ರ ಸಂಜೆ 5.30ರೊಳಗಾಗಿ ಆಯ್ಕೆಗಾಗಿ ಉಪ ನಿರ್ದೇಶಕರು, ರಾಜ್ಯ ಕೇಂದ್ರ ಗ್ರಂಥಾಲಯ, ಕಬ್ಬನ ಉದ್ಯಾನವನ ಬೆಂಗಳೂರು ಇಲ್ಲಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಚೇರಿ ದೂರವಾಡಿ ಸಂಖ್ಯೆ 08352-250644ನ್ನು ಸಂಪರ್ಕಿಸಬಹುದು ಎಂದು ವಿಜಯಪುರ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article