ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರರ ಸಂಘದ ಸಿಂದಗಿ ಘಟಕದ ಪದಾಧಿಕಾರಿಗಳ ಆಯ್ಕೆಯನ್ನು ಭಾನುವಾರ ಮಾಡಲಾಯಿತು. ಅಧ್ಯಕ್ಷರಾಗಿ ಅಸ್ಲಾಂ (ಜುಬೇರ) ಗುಂದಗಿ, ಉಪಾಧ್ಯಕ್ಷರಾಗಿ ಪರಶುರಾಮ ಖೈನೂರ, ಕಾರ್ಯದರ್ಶಿಯಾಗಿ ಶರಣು ಪಾಟೀಲ, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಅರ್ಜುನ್ ರಾಠೋಡ ಅವರನ್ನು ಆಯ್ಕೆ ಮಾಡಲಾಯಿತು.
ಹೊರಗುತ್ತಿಗೆ ಸಿಬ್ಬಂದಿಗೆ ಉತ್ತಮ ಸೇವೆ ಒದಗಿಸಲು ಸಹಕಾರ ಸಂಘಗಳ ಕಾಯ್ದೆ ಅಡಿ ಈಗಾಗಲೇ ಬೀದರ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ಕಾರ್ಯನಿರ್ವಹಿಸುತ್ತಿದೆ. ಇದೇ ಮಾದರಿಯಲ್ಲಿ ನಮ್ಮ ಜಿಲ್ಲೆಯಲ್ಲೂ ಮುಂದಿನ ದಿನಮಾನಗಳಲ್ಲಿ ಆರಂಭವಾಗಲಿದೆ ಎಂದು ಜಿಲ್ಲಾ ಅಧ್ಯಕ್ಷ ಬಸವರಾಜ ಬಡಿಗೇರ ಹೇಳಿದರು. ಈ ವೇಳೆ ಆಯ್ಕೆಯಾದ ಪದಾಧಿಕಾರಿಗಳಿಗೆ ಗೌರವಿಸಲಾಯಿತು.
ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಹಾಂತೇಶ ಬೋಧಿ, ಜಿಲ್ಲಾ ಖಜಾಂಚಿ ಯಾಸ್ಮಿನ್ ಬಡೇಗರ, ಜಿಲ್ಲಾ ಸಮಿತಿಯ ಸದಸ್ಯರಾದ ಪುಂಡಲಿಕ ಹೊಸಮನಿ, ಇಂಡಿ ತಾಲೂಕು ಅಧ್ಯಕ್ಷ ಚಂದ್ರಾಮ ಮೇಡದಾರ, ಉಪಾಧ್ಯಕ್ಷ ಬಾಳಾಸಾಬ ವದರಿ, ಹೀರಗಪ್ಪ ದಿಡ್ಡಿಮನಿ, ಸಕ್ಕೂಬಾಯಿ ಹಾಲಿಮನಿ, ಶೋಭಾ ನಾವಿ, ಶಿಲ್ಪಾ ಬೂದಿ, ಕಸ್ತೂರಿ ಮಾದರ, ರಿಯಾಜ ಅಹ್ಮದ ಕೊರಬು, ಭಾಗ್ಯಶ್ರೀ ಸುಲ್ಫಿ, ಶಾಂತಾಬಾಯಿ ಕೊಚಾಬಾಳ, ಆಫ್ರಿನ ಅತ್ತರ, ಮಲ್ಲಪ್ಪ ಗುಡಿಮನಿ, ರವಿ ನಾಟೀಕಾರ, ಪ್ರಕಾಶ ವಗ್ಗರ, ಬಸಲಿಂಗಪ್ಪ ಬಿರಾದಾರ, ರಾಮಣ್ಣ ರೋಗಿ, ಸಚಿನ ಸುಣಗಾರ, ಮರಪ್ಪ ಡಂಗಿ, ಲಕ್ಷ್ಮಿ ಖಜೂರಗಿ, ಮಲ್ಲಮ್ಮ ನಡುವಿನಕೇರಿ, ದಾವಲಸಾಬ ನಾಟೀಕರ, ಬಸವರಾಜ ಅಲಮೇಲ ಸೇರಿ ಇತರರು ಉಪಸ್ಥಿತರಿದ್ದರು.