ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸ್ಯಾಂಡಲ್ ವುಡ್ ಅಂಗಳದ ಪವರ್ ಸ್ಟಾರ್ ದಿ ಡಾ.ಪುನೀತ್ ರಾಜಕುಮಾರ್ ಅವರು 3ನೇ ವರ್ಷದ ಪುಣ್ಯಸ್ಮರಣೆ ಹಿನ್ನಲೆಯಲ್ಲಿ ಇಂದು ಕುಟುಂಬಸ್ಥರು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ನಮಿಸುತ್ತಿದ್ದಾರೆ. ಅಕ್ಟೋಬರ್ 29, 2021ರಂದು ನಟ ಪುನೀತ್ ರಾಜಕುಮಾರ್ ಅಕಾಲಿಕವಾಗಿ ನಿಧನರಾದರು. ಮರಣೋತ್ತರವಾಗಿ ಡಾಕ್ಟರೇಟ್, ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಯಿತು.