ಪ್ರಜಾಸ್ತ್ರ ಸುದ್ದಿ
ಶ್ರೀನಗರ(Srinagara): ಕಣಿವೆ ನಾಡಿನ ಕಿಶ್ತ್ವಾರ್ ನಲ್ಲಿ ಭದ್ರತಾ ಪಡೆ ನಡೆಸಿದ ಎನ್ ಕೌಂಟರ್ ನಲ್ಲಿ ಮೂವರು ಉಗ್ರರನ್ನು ಮಟ್ಟ ಹಾಕಲಾಗಿದೆ. ಈ ಮೂವರಲ್ಲಿ ಓರ್ವ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಸಂಘಟನೆ ಮೋಸ್ಟ್ ವಾಂಟೆಡ್ ಉಗ್ರ ಸೈಫುಲ್ಲಾ ಎಂದು ತಿಳಿದು ಬಂದಿದೆ. ಈತ 20 ಬಾರಿ ಭದ್ರತಾ ಪಡೆಯಿಂದ ತಪ್ಪಿಸಿಕೊಂಡಿದ್ದನಂತೆ.
ಗುಪ್ತಚರದಿಂದ ಬಂದ ಮಾಹಿತಿ ಬಳಿಕ ಕಾರ್ಯಾಚರಣೆ ನಡೆಸಲಾಗಿದೆ. ಬೆಟ್ಟದ ಇಳಿಜಾರಿನ ಮನೆಯೊಂದರಲ್ಲಿ ಅಡಗಿಕುಳಿತ್ತಿದ್ದರು. ರಾಜ್ಯ ಪೊಲೀಸರು, ಸಿಆರ್ ಪಿಎಫ್, ವಿಶೇಷ ಪಡೆ ಈ ಒಂದು ದಾಳಿಯ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಎನ್ ಕೌಂಟರ್ ಬಳಿಕ ಎರಡು ಅಸಾಲ್ಟ್ ರೈಫಲ್ ಗಳು ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.




