ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ಇತ್ತೀಚೆಗೆ ನಡೆದ ಎಸ್ ಬಿಐ ಎಟಿಎಂ ದರೋಡೆ ಪ್ರಕರಣ ಸಂಬಂಧ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಬರ್ಬನ್ ಠಾಣೆ ಪೊಲೀಸರು ಹರಿಯಾಣ ಮೂಲದ ಆರೋಪಿಗಳಾದ ತಸ್ಲೀಮ್(28) ಹಾಗೂ ಷರೀಫ್(22) ಕಾಲಿಗೆ ಗುಂಡು ಹಾರಿಸಿದ್ದಾರೆ. ಟ್ರಾಮಾ ಸೆಂಟರ್ ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಬಂಧಿತ ತಸ್ಲೀಮ್ ವಿರುದ್ಧ 8 ಪ್ರಕರಣ ಷರೀಫ್ ವಿರುದ್ಧ 3 ಪ್ರಕರಣಗಳಿವೆ. ಕರ್ನಾಟಕ ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ದರೋಡೆ ನಡೆಸಿದ್ದಾರೆ. ಇವರು ಕಳೆದ ಏಪ್ರಿಲ್ 9 ರಂದು ಎಸ್ ಬಿಐ ಎಟಿಎಂ ದರೋಡೆ ಮಾಡಿ 18 ಲಕ್ಷ ರೂಪಾಯಿಯೊಂದಿಗೆ ಪರಾರಿಯಾಗಿದ್ದರು. ಶನಿವಾರ ಮುಂಜಾನೆ ಬೇಲೂರು ಕ್ರಾಸ್ ಕೈಗಾರಿಕಾ ಪ್ರದೇಶದಲ್ಲಿ ಆರೋಪಿಗಳನ್ನು ಬಂಧಿಸುವಾಗ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ.