ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಬಂಧಿಸಲಾಗಿದೆ. ಇವರಿಂದ 54.55 ಲಕ್ಷ ಮೌಲ್ಯದ 105 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಬುಧವಾರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಬರ್ಬನ್ ಠಾಣೆ ವ್ಯಾಪ್ತಿಯಲ್ಲಿ 10 ಕಳ್ಳರನ್ನು ಬಂಧಿಸಿ, 28 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ಟೇಷನ್ ಬಜಾರ್ ಠಾಣೆ ವ್ಯಾಪ್ತಿಯ ಸಿಬ್ಬಂದಿ ಇಬ್ಬರನ್ನು ಬಂಧಿಸಿದ್ದಾರೆ. ಇವರಿಂದ ಸಹ 28 ಬೈಕ್ ಗಳು ಜಪ್ತಿ ಮಾಡಲಾಗಿದೆ. ಅಶೋಕ ನಗರ ಠಾಣೆಯಲ್ಲಿ 4 ಆರೋಪಿಗಳು, 20 ಬೈಕ್ ಗಳು, ಆರ್ ಜೆ ನಗರ ಠಾಣೆಯಲ್ಲಿ 8 ಬೈಕ್, ಐವರು ಆರೋಪಿಗಳು ಸೇರಿದಂತೆ 8 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಬರೋಬ್ಬರಿ 30 ಆರೋಪಿಗಳನ್ನು ಬಂಧಿಸಿದ್ದ, ಇದರಲ್ಲಿ ಇಬ್ಬರು ಬಾಲಕರಿದ್ದಾರೆ.