ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಆಟೋ ಬುಕ್ಕಿಂಗ್ ಮಾಡಿ, ನಂತರ ರದ್ದುಗೊಳಿಸಿದ ಯುವತಿಯ ಮೇಲೆ ಹಲ್ಲೆ ಮಾಡಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಯುವತಿಯನ್ನು ನಿಂದಿಸಿ, ಹಲ್ಲೆ ಮಾಡಿದ ಆಟೋ(Auto Driver) ಚಾಲಕ ಆರೋಪಿ ಆರ್.ಮುತ್ತುರಾಜ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೀಗಾಗಿ ಆಟೋ ಚಾಲಕ ಸಧ್ಯ ಮಾಗಡಿ ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ.
ಯುವತಿಯೊಬ್ಬಳು(Girl) ಆಪ್ ಮೂಲಕ ಆಟೋ ಬುಕ್ ಮಾಡಿದ್ದಾಳೆ. ನಂತರ ಅದನ್ನು ರದ್ದುಗೊಳಿಸಿ ಮತ್ತೊಂದು ಆಟೋದಲ್ಲಿ ಹೋಗಿದ್ದಾಳೆ. ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿ ನಿಂದಿಸಿ ಹಲ್ಲೆ(assault) ಮಾಡಿರುವುದು ಕಂಡು ಬಂದಿದೆ. ಆಕೆಯೊಂದಿಗೆ ಅವಾಚ್ಯ ಶಬ್ಧಗಳಿಂದ ಬೈದಿರುವುದು ವಿಡಿಯೋದಲ್ಲಿದೆ. ಸಾರ್ವಜನಿಕರು, ಇತರೆ ಆಟೋ ಚಾಲಕರು ಹೇಳಿದರೂ ಆತ ಕೇಳಿಲ್ಲ. ಘಟನೆ ಬಗ್ಗೆ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯಕ್ತರು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.