ಪ್ರಜಾಸ್ತ್ರ ಸುದ್ದಿ
ದಾವಣಗೆರೆ(Davanagere): ಮದುವೆ ಬಳಿಕವೂ ಪತ್ನಿಯ ಜೊತೆಗೆ ಸಂಬಂಧ ಹೊಂದಿದ್ದ ಪ್ರಿಯಕರನನ್ನು ಕೊಲೆ ಮಾಡಿದ ಆರೋಪಿಯನ್ನು ಒಂದೇ ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಹೊನ್ನೂರು ಗೊಲ್ಲರಹಟ್ಟಿಯ ಜಯ್ಯಪ್ಪ ಕೊಲೆ ಆರೋಪಿ. ಚಿತ್ರದುರ್ಗ ಜಿಲ್ಲೆ ಹೆಗಡೆಹಾಳ್ ಗ್ರಾಮದ ಶಿವಕುಮಾರ್(28) ಕೊಲೆಯಾದ ಯುವಕ. ಜಯ್ಯಪ್ಪ ಪತ್ನಿ ಪರಿಮಳ ಮದುವೆ ನಂತರವೂ ಪ್ರಿಯಕರನ ಜೊತೆಗೆ ಸಂಬಂಧ ಹೊಂದಿದ್ದಳಂತೆ.
ಪರಿಮಾಳನ್ನು ಭೇಟಿಯಾಗಲು ಗೊಲ್ಲರಹಟ್ಟಿ ಹತ್ತಿರ ಇರುವ ಹೊಲಕ್ಕೆ ಶಿವಕುಮಾರ್ ಬಂದಿದ್ದಾನೆ. ಇಬ್ಬರು ಜೊತೆಗಿರುವುದನ್ನು ನೋಡಿದ ಜಯ್ಯಪ್ಪ ಜಗಳವಾಡಿದ್ದಾನೆ. ಆತನ ತಲೆ ಮೇಲೆ ಕಲ್ಲು ಎತ್ತಾಕಿ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಬಂದ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದರು. ನಂತರ ಪೊಲೀಸ್ ಕ್ರೈಂ ಡಾಗ್ ತಾರಾ ಕೊಲೆಯಾದ ಒಂದು ಗಂಟೆಯಲ್ಲಿಯೇ ಆರೋಪಿಯನ್ನು ಪತ್ತೆ ಹಚ್ಚಿದೆ.