Ad imageAd image

ಮಂಡ್ಯ: ಶಾಲಾ ಬಸ್ ತಡೆದು ಗಲಾಟೆ, ಪುಂಡರ ಬಂಧನ

Nagesh Talawar
ಮಂಡ್ಯ: ಶಾಲಾ ಬಸ್ ತಡೆದು ಗಲಾಟೆ, ಪುಂಡರ ಬಂಧನ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮಂಡ್ಯ(Mandaya): ಖಾಸಗಿ ಶಾಲಾ ಬಸ್ ತಡೆದು 9 ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಕೆಳಗೆ ಇಳಿಸುವಂತೆ ಗಲಾಟೆ ಮಾಡಿದ ಪುಂಡರನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ವಡ್ಡರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಇದೆ ಗ್ರಾಮದ ಕಿರಣ್ ಹಾಗೀ ಗಿರೀಶ್ ಅನ್ನೋ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ವಿಚಾರಣೆ ನಡೆಸಿದ್ದಾರೆ.

ಕಿಕ್ಕೇರಿಯಿಂದ ಬಸವನಹಳ್ಳಿ ಮಾರ್ಗವಾಗಿ ವಡ್ಡರಹಳ್ಳಿಗೆ ಹೋಗುವ ಮಾರ್ಗ ಮಧ್ಯ ಕುಡಿದ ಮತ್ತಿನಲ್ಲಿ ಖಾಸಗಿ ಶಾಲಾ ಬಸ್ ತಡೆದು 9ನೇ ತರಗತಿ ವಿದ್ಯಾರ್ಥಿನಿಯನ್ನು ಕೆಳಗೆ ಇಳಿಸುವಂತೆ ಚಾಲಕನಿಗೆ ಧಮ್ಕಿ ಹಾಕಿದ ಪುಂಡರ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಮಂಡ್ಯ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article