Ad imageAd image

ಜೀವ ವಿಮೆಗಾಗಿ ಸಾವಿನ ನಾಟಕವಾಡಿದವರ ಬಂಧನ

ಜೀವ ವಿಮೆ ಪಡೆಯುವ ಸಲುವಾಗಿ ಅಪಘಾತದಲ್ಲಿ ಮೃತಪಟ್ಟಂತೆ ನಾಟಕವಾಡಿದ ವ್ಯಕ್ತಿಯ ಬಂಧನವಾಗಿದೆ.

Nagesh Talawar
ಜೀವ ವಿಮೆಗಾಗಿ ಸಾವಿನ ನಾಟಕವಾಡಿದವರ ಬಂಧನ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಹಾಸನ(Hasana): ಜೀವ ವಿಮೆ(life insurance) ಪಡೆಯುವ ಸಲುವಾಗಿ ಅಪಘಾತದಲ್ಲಿ ಮೃತಪಟ್ಟಂತೆ ನಾಟಕವಾಡಿದ ವ್ಯಕ್ತಿಯ ಬಂಧನವಾಗಿದೆ. ಹೊಸಕೋಟೆ ತಾಲೂಕಿನ ಚಿಕ್ಕಕೋಲಿಗ ಗ್ರಾಮದ ಮುನಿಶಾಮಿಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ಇಷ್ಟು ಮಾತ್ರವಲ್ಲ ಪತಿಗೆ ಸಾಥ್ ನೀಡಿದ ಪತ್ನಿ ಶಿಲ್ಪಾರಾಣಿಯನ್ನು ಸಹ ಬಂಧಿಸಲಾಗಿದೆ.

ಕಳೆದ ಆಗಸ್ಟ್ 13ರಂದು ಗೊಲ್ಲರಹೊಸಳ್ಳಿ ಗೇಟ್ ಹತ್ತಿರ ಕಾರಿನ ಗಾಲಿ ಬದಲಾಯಿಸುತ್ತಿದ್ದ ವ್ಯಕ್ತಿಗೆ ಲಾರಿ(Accident) ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ಶವವನ್ನು ಹಾಸನ ಜಿಲ್ಲಾಸ್ಪತ್ರೆಯಲ್ಲಿ ಇಡಲಾಗಿತ್ತು. ಅಲ್ಲಿಗೆ ಬಂದ ಪತ್ನಿ ಶಿಲ್ಪಾರಾಣಿ ತನ್ನ ಪತಿ ಮುನಿಶಾಮಿಗೌಡ ಎಂದು ಹೇಳಿ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನಡೆಸಿದ್ದರು. ಆದರೆ, ಶವದ ಕುತ್ತಿಗೆ ಮೇಲೆ ಗಾಯದ ಗುರುತು ಇದ್ದಿದ್ದರಿಂದ ಪೊಲೀಸರು ತನಿಖೆ ನಡೆಸಿದ್ದಾರೆ. ಆಗ ಅಸಲಿ ಸತ್ಯ ಬಯಲಾಗಿದೆ.

ಪತ್ನಿಯ ಮೂಲಕ ನಾಟಕ(Drama) ಮಾಡಿಸಿದ್ದ ಮುನಿಶಾಮಿಗೌಡ ತಲೆಮರೆಸಿಕೊಂಡಿದ್ದ. ಹೀಗಾಗಿ ಊರಲ್ಲಿ ಏನು ನಡೆಯುತ್ತಿದೆ ಎನ್ನುವುದರ ಕುತೂಹಲವಿತ್ತ. ಹೀಗಾಗಿ ಶಿಡ್ಲಘಟ್ಟ ಸಿಪಿಐ ಶ್ರೀನಿವಾಸ್ ಅವರನ್ನು ತಾನೇ ಭೇಟಿಯಾಗಿ ಆಗಸ್ಟ್ 13ರ ರಸ್ತೆ ಅಪಘಾತದಲ್ಲಿ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾನೆ. ಅನುಮಾನ ಬಂದು ಅವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ತಾನು ಮಾಡಿದ ಕೃತ್ಯದ ಬಗ್ಗೆ ಬಾಯಿಬಿಟ್ಟಿದ್ದಾನೆ. ಹೊಸಕೋಟೆಯಲ್ಲಿ ಟಯರ್ ಅಂಗಡಿ ಹೊಂದಿದ್ದ ಈತ ಸಾಲದಲ್ಲಿ ಮುಳುಗಿದ್ದ. ಇದರಿಂದ ಹೊರ ಬರಲು ಜೀವವಿಮೆ ಹಣ ಪಡೆಯಲು ಪ್ಲಾನ್ ಮಾಡಿದ್ದಾನೆ. ಭಿಕ್ಷಕನೊಬ್ಬನನ್ನು ಪರಿಚಯ ಮಾಡಿಕೊಂಡು ಆತನ ವಿಶ್ವಾಸ ಗಳಿಸಿ ಕಾರಿನಲ್ಲಿ ಕರೆದುಕೊಂಡು ಬಂದಿದ್ದಾನೆ.

ಗೊಲ್ಲರಹೊಸಹಳ್ಳಿ ಗೇಟ್ ಹತ್ತಿರ ಕಾರಿನ ಟಯರ್ ಬದಲಿಸುವಂತೆ ಭಿಕ್ಷುಕನಿಗೆ ಹೇಳಿದ್ದಾನೆ. ಇವನನ್ನು ನಂಬಿ ಬಂದ ಅವನ ಸಾವು ಕಾಯುತ್ತಿತ್ತು. ಟಯರ್ ಬದಲಿಸುತ್ತಿದ್ದಾಗ ಕುತ್ತಿಗೆಗೆ ಹಗ್ಗ ಹಾಕಿ ರಸ್ತೆಗೆ ಎಳೆದಿದ್ದಾನೆ. ತಾನು ಮೊದಲೇ ಸಿದ್ಧ ಮಾಡಿ ನಿಲ್ಲಿಸಿದ್ದ ಲಾರಿಯನ್ನು ಆತನ ಮೇಲೆ ಹತ್ತಿಸಿದ್ದಾನೆ. ನಂತರ ತಾನೇ ಸತ್ತಂತೆ ಕಥೆ ಕಟ್ಟಿದ್ದಾನೆ. ಇವನಿಗೆ ಪತ್ನಿ ಸಹ ಸಾಥ್ ನೀಡಿದ್ದಾಳೆ. ಇವರು ಸಾಲದಿಂದ ಹೊರ ಬರಲು ಒಬ್ಬನ ಜೀವವನ್ನೇ ಬಲಿ ಪಡೆದಿದ್ದಾರೆ. ಭಿಕ್ಷುಕನ ಮೇಲೆ ಲಾರಿ ಹತ್ತಿಸಿದವನ ಹುಡುಕಾಟ ನಡೆದಿದೆ.

WhatsApp Group Join Now
Telegram Group Join Now
Share This Article