ವಾರೆಂಟ್ ಆಗಿದೆ, ಯಡಿಯೂರಪ್ಪ ಬೇಗ ಬಂದರೆ ಒಳ್ಳೆಯದು: ಪರಮೇಶ್ವರ್

79

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಬಿಜೆಪಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಆಗಿದೆ. ಇದನ್ನು ಬಿಜೆಪಿ ಖಂಡಿಸಿದ್ದು, ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದೆ.

ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಜಿ.ಪರಮೇಶ್ವರ್, ಬಿಜೆಪಿ ಆರೋಪ ಮಾಡುವುದು ಸಹಜ. ಆದರೆ, ವಿವಿಧ ತನಿಖಾ ಹಂತ, ಎಫ್ಎಸ್ಎಲ್ ವರದಿ ಇರುವುದರಿಂದ ಸ್ವಲ್ಪ ತಡವಾಗಿದೆ. ಯಡಿಯೂರಪ್ಪ ವಿಐಪಿ ಇದ್ದಾರೆ. ಏನಾದರೂ ತಪ್ಪಾದರೆ ಪೊಲೀಸರ ಮೇಲೆ ಬರುತ್ತೆ.

ಇದರಲ್ಲಿ ರಾಹುಲ್ ಗಾಂಧಿ ಅವರ ಕೈವಾಡ ಯಾಕೆ ಬರುತ್ತೆ? ಬಿಜೆಪಿ ಸುಮ್ಮನೆ ಕಥೆ ಕಟ್ಟುತ್ತಿದೆ. ಜಾಮೀನು ರಹಿತ ವಾರೆಂಟ್ ಆಗಿದ್ದು, ಯಡಿಯೂರಪ್ಪ ಬೇಗ ಬಂದರೆ ಒಳ್ಳೆಯದು ಎಂದು ಹೇಳಿದ್ದಾರೆ.
error: Content is protected !!