ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಲಂಚ(Bribery) ಹಾಗೂ ವಂಚನೆ(Fraud) ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಉದ್ಯಮಿ ಗೌತಮ್ ಅದಾನಿ(Gautam Adani) ಹಾಗೂ ಅವರ ಅಳಿಯ ಸಾಗರ್ ಅದಾನಿ ವಿರುದ್ಧ ಅಮೆರಿಕ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಲಾಗಿದೆ. ಸೌರ ವಿದ್ಯುತ್ ಗುತ್ತಿಗೆ ವಿಚಾರದಲ್ಲಿ ಶತಕೋಟಿ ಡಾಲರ್ ಲಂಚ ಹಾಗೂ ವಂಚನೆ ಪ್ರಕರಣದಲ್ಲಿ ಬಂಧನ ವಾರೆಂಟ್ ಹೊರಡಿಸಲಾಗಿದೆ ಎಂದು ವರದಿಯಾಗಿದೆ.
ಭಾರತದಲ್ಲಿ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗಾಗಿ 20 ವರ್ಷಗಳಲ್ಲಿ 2 ಶತಕೋಟಿ ಡಾಲರ್ ಹೂಡಿಕೆಗೆ ಸೆಳೆಯಲು ಅಧಿಕಾರಿಗಳಿಗೆ ಲಂಚ ನೀಡಿದ ಹಾಗೂ ಅಮೆರಿಕ ಸೇರಿದಂತೆ ವಿದೇಶಿ ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿದ ಆರೋಪ ಕೇಳಿ ಬಂದಿದೆ. ಈ ಹಿನ್ನಲೆಯಲ್ಲಿ ಗೌತಮ್ ಅದಾನಿ, ಸೋದರಳಿಯ ಸಾಗರ್ ಅದಾನಿ, ವಿನೀತ್ ಎಸ್.ಜೈನ್ ಎಂಬುವರ ವಿರುದ್ಧ ನ್ಯೂಯಾರ್ಕ್(New York) ಪೂರ್ವ ಜಿಲ್ಲಾ ಕೋರ್ಟ್ ಗೆ ಪ್ರಾಸಿಕ್ಯೂಟರ್ ಆರೋಪಪಟ್ಟಿಯನ್ನು ಸಲ್ಲಿಸಿದ್ದರು.
ಈ ವರದಿ ಬೆನ್ನಲ್ಲೇ ಅದಾನಿ ಗ್ರೂಪ್ ನ ಷೇರು(Sensex) ಮೌಲ್ಯಗಳು ಗುರುವಾರ ಮುಂಜಾನೆಯಿಂದಲೇ ಕುಸಿತ ಕಂಡಿವೆ. ಅದಾನಿ ಎನರ್ಜಿ ಸೆಲೂಷನ್ಸ್, ಅದಾನಿ ಎಂಟರ್ ಪ್ರೈಸಸ್ ಶೇಕಡ 20ರಷ್ಟು ಕುಸಿತ ಕಂಡಿದೆ. ಅದಾನಿ ಗ್ರೀನ್ ಎನರ್ಜಿ ಶೇ 19.17, ಅದಾನಿ ಟೋಟಲ್ ಗ್ಯಾಸ್ ಶೇ 18.14, ಅದಾನಿ ಪವರ್ ಶೇ 17.79, ಅದಾನಿ ಪೋರ್ಟ್ಸ್ ಶೇ 15ರಷ್ಟು ಕುಸಿತು ಕಂಡಿದೆ.