ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಇಪಿಎಫ್ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ವಿರುದ್ಧ ಬಂಧನ ವಾರೆಂಟ್ ಜಾರಿಯಾಗಿದೆ ಎಂದು ತಿಳಿದು ಬಂದಿದೆ. ಪುಲಕೇಶಿ ನಗರ ವ್ಯಾಪ್ತಿಯಲ್ಲಿ ವಾಸವಾಗಿದ್ದು, ಅಲ್ಲಿನ ಪೊಲೀಸ್ ಠಾಣೆಗೆ ಕೆ.ಆರ್ ಪುರಂ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಹೇಳಿದ್ದಾರಂತೆ. 23 ಲಕ್ಷ ರೂಪಾಯಿ ಇಪಿಎಫ್ ವಂಚಿಸಿರುವ ಆರೋಪ ಕೇಳಿ ಬಂದಿದೆ.
ಸಂಚುರೀಸ್ ಲೈಫ್ ಸ್ಟೈಲ್ ಬ್ರ್ಯಾಂಡ್ ಪ್ರೈ.ಲಿ ಎನ್ನುವುದರ ನಿರ್ದೇಶಕರಾಗಿದ್ದಾರೆ. ಇಲ್ಲಿನ ಕೆಲಸಗಾರರಿಗೆ ನೀಡುವ ಸಂಬಳದಲ್ಲಿ ಇಪಿಎಫ್ ಹಣ ಕಡಿತಗೊಳಿಸಲಾಗುತ್ತಿದೆಯಂತೆ. ಆದರೆ, ಅದು ಅವರ ಇಪಿಎಫ್ ಖಾತೆಗೆ ಹಾಕುತ್ತಿಲ್ಲ ಎನ್ನುವ ಆರೋಪವಿದೆ. ರಾಬಿನ್ ಉತ್ತಪ್ಪ ನೀಡಿರುವ ವಿಳಾಸಕ್ಕೆ ಪೊಲೀಸರು ಹೋದರೆ ಅಲ್ಲಿ ಇಲ್ಲ ಎನ್ನುವುದು ತಿಳಿದು ಬಂದಿದೆ ಅಂತಾ ಪೊಲೀಸರು ಹೇಳಿದ್ದಾರೆ.