ಮುರುಘಾಮಠ ಸ್ವಾಮೀಜಿ ವಿರುದ್ಧ ಬಂಧನ ವಾರೆಂಟ್

293

ಪ್ರಜಾಸ್ತ್ರ ಸುದ್ದಿ

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಒಂದು ವರ್ಷದ ಬಳಿಕ ಜಾಮೀನು ಸಿಕ್ಕಿದ್ದು ಶನಿವಾರಷ್ಟೇ ಜೈಲಿನಿಂದ ಹೊರಗೆ ಬಂದಿದ್ದ ಮುರುಘಾಮಠದ ಶಿವಮೂರ್ತಿ ಸ್ವಾಮೀಜಿಗೆ ಇದೀಗ ಬಂಧನ ವಾರೆಂಟ್ ನೀಡಲಾಗಿದೆ.

ಎರಡನೇ ಪೋಕ್ಸೋ ಪ್ರಕರಣದಲ್ಲಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್ ಆದೇಶಿಸಿದೆ. ಹೀಗಾಗಿ ಮತ್ತೆ ಸ್ವಾಮೀಜಿ ಬಂಧನವಾಗಲಿದೆ. ಮಂಗಳವಾರದವರೆಗೆ ಕೋರ್ಟ್ ಗೆ ಹಾಜರು ಪಡೆಸಲು ಸಮಯ ನೀಡಿದ್ದು, ಪೊಲೀಸರು ಮಠಕ್ಕೆ ಆಗಮಿಸಲಿದ್ದಾರೆ.

ಮೊದಲ ಪ್ರಕರಣದಲ್ಲಿ ಷರತ್ತು ಬದ್ಧ ಜಾಮೀನು ಸಿಕ್ಕಿದ್ದು, ನವೆಂಬರ್ 16ರಂದು ಬಿಡುಗಡೆಯಾಗಿದೆ. ದಾವಣಗೆರೆಯ ವಿರಕ್ತ ಮಠದಲ್ಲಿದ್ದಾರೆ. ಎರಡನೇ ಪ್ರಕರಣದಲ್ಲಿ ಕೋರ್ಟ್ ಗೆ ಹಾಜರಾಗಲು ಸೂಚಿಸಿದ್ದರು. ಆದರೂ ಹಾಜರಾಗಿರಲಿಲ್ಲ. ವಿಡಿಯೋ ಕಾನ್ಫ್ ರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ವಕೀಲರು ಕೋರಿದ್ದರು. ಇದಕ್ಕೆ ಒಪ್ಪದ ಕೋರ್ಟ್ ಆರೋಪಿ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ.
error: Content is protected !!