ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಬಾಂಬ್ ಬೆದರಿಕೆ ಹಾಕಿದ್ದ ಆರೋಪಿಯನ್ನು ನೋಯ್ಡಾದಲ್ಲಿ ಶನಿವಾರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಅಶ್ವಿನ್ ಎಂದು ತಿಳಿದು ಬಂದಿದೆ. ಗಣೇಶೋತ್ಸವ ಸಂಭ್ರಮದಲ್ಲಿ ಬಾಂಬ್ ಸ್ಫೋಟಿಸುವ ಮೂಲಕ ಕೋಟ್ಯಾಂತರ ಜನರ ಸಾವಿಗೆ ಕಾರಣವಾಗಲಿದೆ ಎಂದು ಮುಂಬೈ ಟ್ರಾಫಿಕ್ ಪೊಲೀಸರಿಗೆ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿತ್ತು.
ಬಂಧಿತ ಅಶ್ವಿನ್ ಕುಮಾರ್ ಬಿಹಾರದ ಪಾಟಲಿಪುತ್ರ ಮೂಲದವನಾಗಿದ್ದಾನೆ. ಕಳೆದ ಐದು ವರ್ಷಗಳಿಂದ ನೊಯ್ಡಾದಲ್ಲಿ ನೆಲಸಿದ್ದ. ಜ್ಯೋತಿಷಿಯೆಂದು ಹೇಳಿಕೊಂಡಿದ್ದನಂತೆ. ಪಾಕಿಸ್ತಾನ ಮೂಲದ ಉಗ್ರರಿಂದ 400 ಕೆಜಿ ಆರ್ ಡಿಎಕ್ಸ್ ಬಂದಿದೆ ಎಂದು ಆರೋಪಿ ಹೇಳಿದ್ದಾನೆ. ಹೀಗಾಗಿ ಪೊಲೀಸರು ಅಲರ್ಟ್ ಆಗಿದ್ದಾರೆ.