Ad imageAd image

ಕಣಿವೆ ನಾಡಿನಲ್ಲಿ ಆರ್ಟಿಕಲ್ 370 ಮತ್ತೆಂದೂ ಬರಲ್ಲ: ಅಮಿತ್ ಶಾ

ಕಣಿವೆ ನಾಡು ಜಮ್ಮು ಕಾಶ್ಮೀರ್ ವಿಧಾನಸಭಾ ಚುನಾವಣೆ ಸಂಬಂಧ ಶುಕ್ರವಾರ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಣಾಳಿಕೆ ಬಿಡುಗಡೆ ಮಾಡಿದರು.

Nagesh Talawar
ಕಣಿವೆ ನಾಡಿನಲ್ಲಿ ಆರ್ಟಿಕಲ್ 370 ಮತ್ತೆಂದೂ ಬರಲ್ಲ: ಅಮಿತ್ ಶಾ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಶ್ರೀನಗರ(Srinagara): ಕಣಿವೆ ನಾಡು ಜಮ್ಮು(jammu and kashmir) ಕಾಶ್ಮೀರ್ ವಿಧಾನಸಭಾ ಚುನಾವಣೆ ಸಂಬಂಧ ಶುಕ್ರವಾರ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ(amit shah) ಪ್ರಣಾಳಿಕೆ(manifesto) ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಜಮ್ಮು ಕಾಶ್ಮೀರದಲ್ಲಿ ಮತ್ತೆಂದೂ ಆರ್ಟಿಕಲ್ 370 ಬರುವುದಿಲ್ಲ. ಅದು ಈಗ ಇತಿಹಾಸ ಎಂದು ಹೇಳಿದರು. ಈ ವಿಧಿಯಲ್ಲಿದ್ದ ವಿಶೇಷ ಸ್ಥಾನಮಾನ ಮತ್ತೆ ಜಾರಿಗೆ ಬರುವುದಿಲ್ಲವೆಂದು ದೇಶದ ಜನರಿಗೆ ಸ್ಪಷ್ಟಪಡಿಸುತ್ತಿದ್ದೇನೆ.

ಕಳೆದ 10 ವರ್ಷಗಳಲ್ಲಿ ಜಮ್ಮು ಕಾಶ್ಮೀರದಲ್ಲಿನ ಆಡಳಿತ ಸ್ವರ್ಣಾಕ್ಷರದಲ್ಲಿ ಬರೆದು ಇಡುವಂತದ್ದು. 370 ಸಂವಿಧಾನದ ಭಾಗವಲ್ಲ. ಇಲ್ಲಿ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿಷೇಧ ಮಾಡುವುದು ನಮ್ಮ ಗುರಿಯಾಗಿದೆ. ಹೀಗಾಗಿ ಒಮ್ಮೆ ನಮಗೆ ಐದು ವರ್ಷಗಳ ಅಧಿಕಾರ ನೀಡುವಂತೆ ಜನರಲ್ಲಿ ಮನವಿ ಮಾಡುತ್ತೇನೆ. ಚುನಾವಣೆ ಫಲಿತಾಂಶ ಏನೇ ಆಗಿರಲಿ. ಬಕರ್ವಾಲ್, ಗಜ್ಜರ್ ಹಾಗೂ ಪಹಾರಿಗಳಿಗೆ ನೀಡಿರುವ ಮೀಸಲಾತಿಗೆ ನಿಮಗೆ ಕೈ ಇಡಲು ಅವಕಾಶ ನೀಡುವುದಿಲ್ಲವೆಂದು ಉಮರ್ ಅಬ್ದುಲ್ಲಾ ಅವರಿಗೆ ಹೇಳಲು ಬಯಸುತ್ತೇನೆ ಎಂದರು.

WhatsApp Group Join Now
Telegram Group Join Now
Share This Article