ಪ್ರಜಾಸ್ತ್ರ ಸುದ್ದಿ
ಏಷ್ಯ ಕಪ್ ಟೂರ್ನಿ ಫೈನಲ್ ಹಂತಕ್ಕೆ ಬಂದಿದೆ. ಸೆಪ್ಟೆಂಬರ್ 28ರಂದು ಭಾನುವಾರ ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಬರೋಬ್ಬರಿ 41 ವರ್ಷಗಳ ಬಳಿಕ ಭಾರತ ಹಾಗೂ ಪಾಕಿಸ್ತಾನ ಫೈನಲ್ ನಲ್ಲಿ ಎದುರು ಬದುರು ಆಗುತ್ತಿದ್ದು, ಕ್ರಿಕೆಟ್ ಪ್ರೇಮಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. 1985ರಲ್ಲಿ ಮೆಲ್ಬರ್ನ್ ನಲ್ಲಿ ನಡೆದ ವಲ್ಡ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು, ಟೀಂ ಇಂಡಿಯಾ 8 ವಿಕೆಟ್ ಗಳಿಂದ ಜಯ ಸಾಧಿಸಿತ್ತು.
ಭಾರತ ಹಾಗೂ ಪಾಕಿಸ್ತಾನ ಫೈನಲ್ ನಲ್ಲಿ ಮುಖಾಮುಖಿಯಾಗುತ್ತಿರುವುದು 6ನೇ ಬಾರಿಯಾಗಿದೆ. ಇದಕ್ಕೂ ಮೊದಲು ಪಾಕಿಸ್ತಾನ 3, ಭಾರತ 2 ಸಾರಿ ಗೆಲುವು ಸಾಧಿಸಿವೆ. 16 ಏಷ್ಯ ಕಪ್ ಟೂರ್ನಿಯಲ್ಲಿ ಭಾರತ 8 ಬಾರಿ ವಿಜಯ ಸಾಧಿಸಿದೆ. ಶ್ರೀಲಂಕಾ 6 ಸಲ, ಪಾಕಿಸ್ತಾನ 2 ಸಲ ಗೆಲುವು ಸಾಧಿಸಿದೆ. ಗುರುವಾರ ಸೂಪರ್-2 ಸುತ್ತಿನ ನಿರ್ಣಾಯಕ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಗೆದ್ದ ಪಾಕ್ ಫೈನಲ್ ಗೆ ಬಂದಿದೆ.