Ad imageAd image

ಸರ್ಕಾರಿ ಭೂಮಿ ಕಬಳಿಸಿ, ಸರ್ಕಾರಕ್ಕೆ ಗಿಫ್ಟ್ ಕೊಟ್ಟ ದಾನಶೂರ ಅಶೋಕ್: ಪರಮೇಶ್ವರ್

ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧ ನೂರಾರು ಕೊಟಿ ರೂಪಾಯಿ ಹಗರಣದ ಗಂಭೀರ ಆರೋಪ ಮಾಡಲಾಗಿದೆ. ಗೃಹ ಸಚಿವ ಜಿ.ಪರಮೇಶ್ವರ್

Nagesh Talawar
ಸರ್ಕಾರಿ ಭೂಮಿ ಕಬಳಿಸಿ, ಸರ್ಕಾರಕ್ಕೆ ಗಿಫ್ಟ್ ಕೊಟ್ಟ ದಾನಶೂರ ಅಶೋಕ್: ಪರಮೇಶ್ವರ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್(R.Ashok) ವಿರುದ್ಧ ನೂರಾರು ಕೊಟಿ ರೂಪಾಯಿ ಹಗರಣದ ಗಂಭೀರ ಆರೋಪ ಮಾಡಲಾಗಿದೆ. ಗೃಹ ಸಚಿವ ಜಿ.ಪರಮೇಶ್ವರ್(G.Parameshwar) ಈ ಬಗ್ಗೆ ದಾಖಲೆಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಪಕ್ಷ ನಾಯಕ, ದಾನವೀರ ಸಾಮ್ರಾಟ್ ಅಶೋಕ್ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪನವರ(BSY) ರೋಚಕ ಗಿಫ್ಟ್ ಕಥೆ ಇಲ್ಲಿದೆ ಅಂತಾ ಹೇಳುವ ಮೂಲಕ ವ್ಯಂಗ್ಯ ಭರಿತವಾಗಿ ವಾಗ್ದಾಳಿ ನಡೆಸಿದರು.

ಲೊಟ್ಟೆಗೊಲ್ಲಹಳ್ಳಿ ಭೂ ಹಗರಣವನ್ನು ಮುಚ್ಚಿ ಹಾಕಿದ್ದಾರೆ. ಸರ್ಕಾರಿ ಭೂಮಿ ಕಬಳಸಿದ್ದು, ಸಿಕ್ಕಿ ಬೀಳುವ ಹಂತದಲ್ಲಿ ಡೀಡಿ ರೂಪದಲ್ಲಿ ಸರ್ಕಾರಕ್ಕೆ ಗಿಫ್ಟ್ ಕೊಟ್ಟ ದಾನಶೂರ ಸಾಮ್ರಾಟ್ ಅಶೋಕ್ ಅವರ ಹಿನ್ನಲೆಯಿದೆ. ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವಾಗ ಬೇರೆಯವರ ತಟ್ಟೆಯಲ್ಲಿ ಇಲ್ಲದ ನೊಣ ಹುಡುಕಲು ಹೊರಟಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಸಣ್ಣದೊಂದು ಉದಾಹರಣೆ ಅಂತಾ ಕಿಡಿ ಕಾರಿದರು.

ಲೊಟ್ಟೆಗೊಲ್ಲಹಳ್ಳಿಯ ಸರ್ವೇ ನಂಬರ್ 10/1, 10/11 ಹಾಗೂ ಎಫ್1 ಮತ್ತು 10/11ಎಫ್2 32 ಗುಂಟೆ ಜಾಗವನ್ನು ಬಿಡಿಎ(BDA) ಗುರುತಿಸಿ ಫೆಬ್ರವರಿ 24, 1977ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಫೆಬ್ರವರಿ 26, 2003 ಹಾಗೂ ನವೆಂಬರ್ 12, 2017ರಲ್ಲಿ ಶುದ್ಧಕ್ರಯ ಪತ್ರದ ಮೂಲಕ ಬಿಡಿಎ ಮಾಲೀಕತ್ವದ ನೋಟಿಫೈಡ್ ಜಾಗವನ್ನು ಆರ್.ಅಶೋಕ್ ಅವರು ಖರೀದಿಸುತ್ತಾರೆ. 2009ರಲ್ಲಿ ಮೂಲ ಮಾಲೀಕರಾದ ರಾಮಸ್ವಾಮಿಯವರು ಅಂದಿನ ಸಿಎಂ ಯಡಿಯೂರಪ್ಪನವರಿಗೆ ಜಮೀನನ್ನು ಭೂಸ್ವಾಧೀನದಿಂದ ಕೈ ಬಿಡುವಂತೆ ಅರ್ಜಿ ಸಲ್ಲಿಸುತ್ತಾರೆ. ಕಡತದಲ್ಲಿ ಇದನ್ನು ಮಂಡಿಸಿ ಎರಡೇ ತಿಂಗಳಲ್ಲಿ ಕೈ ಬಿಡಲಾಗುತ್ತೆ. ಈ ಸಂಬಂಧ ಲೋಕಾಯುಕ್ತದಲ್ಲಿ ಪ್ರಕರಣ ಸಹ ಬಾಕಿ ಉಳಿದಿದೆ ಎಂದು ಹೇಳುವ ಮೂಲಕ ಮುಡಾ ಪ್ರಕರಣ ಸಂಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆಸುತ್ತಿರುವ ಹೋರಟಕ್ಕೆ ತಿರುಗೇಟು ನೀಡಿದ್ದಾರೆ.

WhatsApp Group Join Now
Telegram Group Join Now
Share This Article