Ad imageAd image

ಅಲಕ್ಷಿತ ಸಮುದಾಯಗಳ ಪರ ಧ್ವನಿ ಎತ್ತುವ ‘ಚಿಮಣಿ ಬೆಳಕಿನ ಬದುಕು’ ನಾಟಕ: ಅಶೋಕ ಬಿರಾದಾರ

ಪಟ್ಟಣದ ಮಾಧ್ಯಮರಂಗ ಫೌಂಡೇಶನ್ ಹಾಗೂ ದೇವರ ಹಿಪ್ಪರಗಿಯ ಕೊಂಡಗೂಳಿಯ ಆರೂರು ಗೆಳೆಯರ ಬಳಗದ ವತಿಯಿಂದ, ಕನ್ನಡ ರಾಜ್ಯೋತ್ಸವ ಸಂಭ್ರಮ ಹಾಗೂ

Nagesh Talawar
ಅಲಕ್ಷಿತ ಸಮುದಾಯಗಳ ಪರ ಧ್ವನಿ ಎತ್ತುವ ‘ಚಿಮಣಿ ಬೆಳಕಿನ ಬದುಕು’ ನಾಟಕ: ಅಶೋಕ ಬಿರಾದಾರ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಪಟ್ಟಣದ ಮಾಧ್ಯಮರಂಗ ಫೌಂಡೇಶನ್ ಹಾಗೂ ದೇವರ ಹಿಪ್ಪರಗಿಯ ಕೊಂಡಗೂಳಿಯ ಆರೂರು ಗೆಳೆಯರ ಬಳಗದ ವತಿಯಿಂದ, ಕನ್ನಡ ರಾಜ್ಯೋತ್ಸವ ಸಂಭ್ರಮ ಹಾಗೂ ಲೇಖಕ ನಾಗೇಶ ತಳವಾರ ಅವರ ಚಿಮಣಿ ಬೆಳಕಿನ ಬದುಕು ನಾಟಕದ ವಿಮರ್ಶೆ ಕಾರ್ಯಕ್ರಮ ಶನಿವಾರ ಮಧ್ಯಾಹ್ನ ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ನಡೆಯಿತು. ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಆನಂದ ಶಾಬಾದಿ ಅವರು ಕನ್ನಡದ ಮೊದಲ ಶಾಸನವಾದ ಹಲ್ಮಿಡಿ ಶಾಸನದ ಫೋಟೋಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಕರ್ನಾಟಕ ಏಕೀಕರಣಕ್ಕಾಗಿ ಸಾಕಷ್ಟು ಮಹನೀರು ಹೋರಾಟ ಮಾಡಿದ್ದಾರೆ. ಅವರನ್ನೆಲ್ಲ ಸ್ಮರಿಸಿಕೊಳ್ಳಬೇಕು. ಸಂದರ್ಭ ಬಂದಾಗಲೆಲ್ಲ ನಾವೆಲ್ಲರೂ ಕನ್ನಡಕ್ಕಾಗಿ ಧ್ವನಿ ಎತ್ತಬೇಕು ಎಂದು ಕಾನಿಪ ಅಧ್ಯಕ್ಷ ಆನಂದ ಶಾಬಾದಿ ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರಣಧೀರ ಪಡೆಯ ಉತ್ತರ ವಲಯ ಅಧ್ಯಕ್ಷರಾದ ಸಂತೋಷ ಮಣಿಗಿರಿ ಮಾತನಾಡಿ, ನಾಡು-ನುಡಿ ವಿಚಾರ ಬಂದಾಗ ಕನ್ನಡಪರ ಸಂಘಟನೆಗಳ ಪಾತ್ರ ಬಹುದೊಡ್ಡದಿದೆ. ತಾಯ್ನುಡಿಗಾಗಿ, ನೆಲಕ್ಕಾಗಿ ಹೋರಾಡಿದ್ದಕ್ಕಾಗಿ ನಮ್ಮ ಮೇಲೆ ನೂರಾರು ಪ್ರಕರಣಗಳಿವೆ. ಕನ್ನಡಪರ, ರೈತಪರ, ದಲಿತಪರ ಸಂಘಟನೆಗಳ ಹೋರಾಟಗಾರರ ಮೇಲೆ ಇರುವಷ್ಟು ಪ್ರಕರಣಗಳು ಯಾರ ಮೇಲೂ ಇಲ್ಲ. ಆದರೆ, ಕನ್ನಡಪರ ಸಂಘಟನೆಕಾರರನ್ನು ಕೆಲವರು ರೋಲ್ ಕಾಲ್ ಹೋರಾಟಗಾರರು ಎಂದಿದ್ದು ಇಂದಿಗೂ ನೋವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಲ್ಮಿಡಿ ಶಾಸನದ ಫೋಟೋಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟನೆ.

ಚಿಮಣಿ ಬೆಳಕಿನ ಬದುಕು ನಾಟಕ ಕೃತಿಯ ವಿಮರ್ಶೆ ಮಾಡಿದ ಲೇಖಕ ಅಶೋಕ ಬಿರಾದಾರ, ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗವನ್ನು ಕೇಂದ್ರವಾಗಿಟ್ಟುಕೊಂಡು ರಚನೆಯಾದ ಈ ನಾಟಕ ಅಲಕ್ಷಿತ ಸಮುದಾಯಗಳ ಪರ ಧ್ವನಿ ಎತ್ತುತ್ತೆ. 21ನೇ ಶತಮಾನದಲ್ಲಿಯೂ ನಮ್ಮನ್ನಾಳುವ ಸರ್ಕಾರಗಳು, ಮುಂದುವರೆದ ಸಮುದಾಯಗಳು ಅಲೆಮಾರಿಗಳನ್ನು, ದಲಿತರನ್ನು, ಹಿಂದುಳಿದ ವರ್ಗವನ್ನು ನೋಡುವ, ನಡೆಸಿಕೊಳ್ಳುವ ದೃಷ್ಟಿಕೋನ ಬದಲಾಗದೆ ಇರುವುದರ ಹುನ್ನಾರದ ಕುರಿತು ತುಂಬಾ ತೀವ್ರವಾಗಿ ಬರಹಗಾರರು ಹೇಳಿದ್ದಾರೆ. ಈಗಾಗ್ಲೇ ಅವ್ವ ಮತ್ತು ಸೈಕಲ್ ಕಥಾ ಸಂಕನಲದಲ್ಲಿ ತಳಸಮುದಾಯಗಳ ಬದುಕು ಬವಣೆ ಇದ್ದರೆ, ದಂದುಗ ಕಾದಂಬರಿಯಲ್ಲಿ ಸ್ತ್ರೀಸಂವೇದೆನೆಯಿದೆ. ಹೀಗೆ ಲೇಖಕ ನಾಗೇಶ ತಳವಾರವಾರ ಕೃತಿಗಳು ಗ್ರಾಮೀಣ ಬದುಕು ಮತ್ತು ನಾಗರೀಕ ಸಮಾಜ ಕಡೆಗಣಿಸಿಲ್ಪಟ್ಟವರ ಕುರಿತಾಗಿಯೇ ಮಾತನಾಡುತ್ತವೆ ಎಂದರು.

ಈ ವೇಳೆ ಕರ್ನಾಟಕ ರಾಜ್ಯ ರೈತ ಸೇನೆ ತಾಲೂಕಾಧ್ಯಕ್ಷ ಬಸವರಾಜ ರಂಜುಣಗಿ, ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಎಸಿಡಿಪಿಒ ಎಸ್.ಎನ್ ಕೋರವಾರ, ಪತ್ರಕರ್ತರಾದ ನಿಂಗರಾಜ ಅತನೂರ, ಸಿದ್ಧಲಿಂಗ ಕಿಣಗಿ, ಆರೀಫ ಅಂತರಗಂಗಿ, ಶಿವಕುಮಾರ ಬಿರಾದಾರ, ಶಿಕ್ಷಕರಾದ ಸಂಜೀವಕುಮಾರ ಡಾಂಗಿ, ಮಹಾಂತೇಶ ಜಾಲವಾದಿ, ಜಗದೀಶ ಚಲವಾದಿ, ಶಿವಾನಂದ ಶಹಾಪೂರ, ದಲಿತಪರ ಸಂಘಟನೆಯ ಮುಖಂಡ ಹರ್ಷವರ್ಧನ, ಮಲ್ಲು ಹಿರೋಳ್ಳಿ, ಶೋಭಾ ಅಶೋಕ ಬಿರಾದಾರ, ಶ್ರೇಯಸ, ಸುದೀಪ, ಸೇರಿದಂತೆ ಅನೇಕರು ಭಾಗವಹಿಸಿದ್ದರು. ಮಾಧ್ಯಮರಂಗ ಫೌಂಡೇಶನ್ ಅಧ್ಯಕ್ಷ ನಾಗೇಶ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿ, ಶಿಕ್ಷಕ ರಾಚು ಕೊಪ್ಪ ಸ್ವಾಗತಿಸಿದರು. ಕವಿ, ಶಿಕ್ಷಕ ಬಸವರಾಜ ಭೂತಿ ನಿರೂಪಿಸಿ ವಂದಿಸಿದರು.

WhatsApp Group Join Now
Telegram Group Join Now
Share This Article