Ad imageAd image

ಲಾಟರಿ ಮೂಲಕ ಮನೆಗಳ ಹಂಚಿಕೆ: ಶಾಸಕ ಅಶೋಕ ಮನಗೂಳಿ

Nagesh Talawar
ಲಾಟರಿ ಮೂಲಕ ಮನೆಗಳ ಹಂಚಿಕೆ: ಶಾಸಕ ಅಶೋಕ ಮನಗೂಳಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಕಳೆದೊಂದು ವರ್ಷದಿಂದ ಆಶ್ರಯ ಸಮಿತಿ ಸಭೆ ನಡೆದಿರಲಿಲ್ಲ. 750 ಮನೆಗಳ ಹಂಚಿಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗೆ ದೂರು ನೀಡಲಾಗಿತ್ತು. ಹೀಗಾಗಿ ಪಾರದರ್ಶಕವಾಗಿ ಮನೆಗಳ ಹಂಚಿಕೆ ನಡೆಯಬೇಕು. ಆದ್ದರಿಂದ ಲಾಟರಿ ಮೂಲಕ ಮೀಸಲಾತಿ ಅನುಸಾರ ಆಯ್ಕೆ ಮಾಡಲಾಗುವುದು ಎಂದು ಆಶ್ರಯ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಅಶೋಕ ಮನಗೂಳಿ ಹೇಳಿದರು. ಬುಧವಾರ ಪುರಸಭೆ ಸಭಾ ಭವನದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಒಂದೇ ಕುಟುಂಬದಲ್ಲಿ ಅಣ್ಣ, ತಮ್ಮ, ಹೆಂಡ್ತಿ, ತಾಯಿ ಎಂದುಕೊಂಡು ವಸತಿ ಯೋಜನೆಯ ಮನೆಗಳನ್ನು ಪಡೆದುಕೊಳ್ಳುತ್ತಿರುವುದು ಮೊದಲಿನಿಂದಲೂ ನಡೆಯುತ್ತಿದೆ. ಇದು ಕೇವಲ ಜನಪ್ರತಿನಿಧಿಗಳು, ಅಧಿಕಾರಿಗಳ ಜವಾಬ್ದಾರಿ ಮಾತ್ರವಲ್ಲ. ಸಾರ್ವಜನಿಕರ ಜವಾಬ್ದಾರಿಯೂ ಇದೆ ಎಂದರು.

750 ಮನೆಗಳಲ್ಲಿ 575 ಫಲಾನುಭವಿಗಳು ಅರ್ಹರಾಗಿದ್ದಾರೆ. 110 ಸ್ಥಳೀಯರದಲ್ಲದ ಅನರ್ಹ ಫಲಾನುಭವಿಗಳನ್ನು ಕೈಬಿಡಬೇಕು. 175 ಮನೆಗಳ ಆಯ್ಕೆಗಾಗಿ ಪ್ರಕಟಣೆ ಹೊರಡಿಸಬೇಕು. ಅವುಗಳನ್ನು ಮೀಸಲಾತಿ ಪ್ರಕಾರ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು. ಅಂತರಗಂಗಿಗೆ ಸಂಬಂಧಿಸಿದ ಮನೆಗಳಿಗೂ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು ಎಂದರು. ಇನ್ನು ಸರ್ವೇ ನಂಬರ್ 474ರ ವಸತಿ ಯೋಜನೆಯ ಜಾಗದಲ್ಲಿ ಸರಿಸುಮಾರು 10 ಎಕರೆ ಪ್ರದೇಶದಲ್ಲಿ 30 ಅಡಿ ಆಳದಷ್ಟು ಅಕ್ರಮವಾಗಿ ಗರಸು ಸಾಗಾಟ ಮಾಡಲಾಗಿದೆ. ಎರಡು ಅಧಿಕಾರಿಗಳಿಗೆ ಹೇಳಿದರೂ ಕ್ರಮ ತೆದುಕೊಂಡಿಲ್ಲ ಎಂದು ಆಶ್ರಯ ಸಮಿತಿ ಸದಸ್ಯ ಭೀಮಾಶಂಕರ ರೋಡಗಿ ಆಕ್ರೋಶ ವ್ಯಕ್ತಪಡಿಸಿದರು.

‘ವಸತಿ ಯೋಜನೆಯ 750 ಮನೆಗಳಲ್ಲಿ ಕೆಲವು ಮನೆಗಳನ್ನು ಬೋಗಸ್ ಫಲಾನುಭವಿಗಳಿಗೆ ಆಯ್ಕೆ ಮಾಡಲಾಗಿತ್ತು. ನನ್ನ ದೂರಿನಿಂದ ಜಿಲ್ಲಾಧಿಕಾರಿಗಳು ತಡೆಹಿಡಿದಿದ್ದರು. ಈಗ ಲಾಟರಿ ಮೂಲಕ ಪಾರದರ್ಶಕವಾಗಿ ಆಯ್ಕೆ ಮಾಡುವುದಾಗಿ ಶಾಸಕರು ಹೇಳಿದ್ದಾರೆ. ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇನೆ. ಮತ್ತೆ ಏನಾದರೂ ಅನ್ಯಾಯವಾದರೆ ಹೋರಾಟ ಮಾಡುತ್ತೇನೆ’. – ಶಿವಾನಂದ ಆಲಮೇಲ, ದೂರುದಾರ

ಅಲ್ಲದೆ ಸರ್ವೇ ನಂಬರ್ 842ರ ಜಾಗಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಾಲೀಕರಿಗೆ ಜಾಗ ಬಿಟ್ಟುಕೊಡಲು ಹೇಳಿದ್ದು, ಇಲ್ಲದಿದ್ದರೆ ಮುಖ್ಯಾಧಿಕಾರಿಗಳ ಬಂಧನ ವಾರೆಂಟ್ ಹೊರಡಿಸಲಾಗುವುದು ಎಂದು ಹೈಕೋರ್ಟ್ ಹೇಳಿದೆ ಎಂದು ಮುಖ್ಯಾಧಿಕಾರಿ ರಾಜಶೇಖರ.ಎಸ್ ಹೇಳಿದರು. ಹೈಕೋರ್ಟ್ ಆದೇಶ ಉಲ್ಲಂಘನೆ ಎಂದು ಸ್ಥಳೀಯ ನ್ಯಾಯಾಲಯದಲ್ಲಿ ಜಾಗದ ಮಾಲೀಕರು ದಾವೆ ಹೂಡಿದ್ದು, ಜೂನ್ 30ರೊಳಗೆ ಮನೆಗಳನ್ನು ಖಾಲಿ ಮಾಡಿಸಿ ಜಾಗವನ್ನು ಮಾಲೀಕರ ಕಬ್ಜಾಗೆ ಕೊಡಬೇಕು ಎಂದು ಹೇಳಿದೆ ಎಂದರು. ಸುಪ್ರೀಂ ಕೋರ್ಟ್ ಗೆ ಹೋಗಿ 6 ತಿಂಗಳಾಗಿದ್ದರೂ ಎಸ್ಎಲ್ ಪಿ ಆಗದೆ ಇರುವ ಬಗ್ಗೆ ಶಾಸಕರು ಪ್ರಶ್ನಿಸಿದರು.

ಸಭೆಯಲ್ಲಿ ಪುರಸಭೆ ಅಧ್ಯಕ್ಷ ಶಾಂತವೀರ ಮನಗೂಳಿ, ಆಶ್ರಯ ಸಮಿತಿ ಸದಸ್ಯರಾದ ಶೈಲಾ ಪೂಜಾರಿ, ರಾಜಅಹ್ಮದ ಖೇಡ, ಮಲ್ಲಿಕಾರ್ಜುನ ಸದುಗೋಳ, ಭೀಮಾಶಂಕರ ರೋಡಗಿ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

WhatsApp Group Join Now
Telegram Group Join Now
Share This Article