ಪ್ರಜಾಸ್ತ್ರ ಸುದ್ದಿ
ಗಾಬಾ(Gabba): ಆಸ್ಟ್ರೇಲಿಯಾ ನೆಲದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ 5 ಟೆಸ್ಟ್ ಸರಣಿಯ ನಡುವೆಯೇ ಭಾರತದ ಖ್ಯಾತ ಸ್ಪೀನ್ ಬೌಲರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. 3ನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ. ಈ ವೇಳೆ ನಡೆದ ಮಾಧ್ಯಮಗೋಷ್ಠಿಯಲ್ಲಿ 38 ವರ್ಷದ ಅಶ್ವಿನ್ ಕ್ರಿಕೆಟ್ ಆಟಕ್ಕೆ ವಿದಾಯ ಹೇಳಿ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಆಲ್ ರೌಂಡರ್ ಆಟದ ಮೂಲಕ ಟೀಂ ಇಂಡಿಯಾಗೆ ಹಲವು ಬಾರಿ ಗೆಲುವು ತಂದು ಕೊಟ್ಟಿದ್ದಾರೆ.
3ನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಕೈ ಬಿಡಲಾಗಿತ್ತು. 106 ಟೆಸ್ಟ್ ಪಂದ್ಯಗಳಲ್ಲಿ 200 ಇನ್ನಿಂಗ್ಸ್ ಆಡಿದ್ದಾರೆ. ಇದರಲ್ಲಿ 537 ವಿಕೆಟ್ ಪಡೆಯುವ ಮೂಲಕ ಕನ್ನಡಿಗ ಅನಿಲ್ ಕುಂಬ್ಳೆ ಬಳಿಕ ಭಾರತದ ಪರ ಹೆಚ್ಚು ವಿಕೆಟ್ ಪಡೆದ 2ನೇ ಆಟಗಾರರಾಗಿದ್ದಾರೆ. 3,503 ರನ್ ಗಳಿಸಿದ್ದಾರೆ. ಇದರಲ್ಲಿ 6 ಶತಕ, 14 ಅರ್ಧ ಶತಕ ಗಳಿಸುವ ಮೂಲಕ ಬ್ಯಾಟಿಂಗ್ ನಲ್ಲೂ ಮಿಂಚಿದ್ದಾರೆ. ಅನೇಕ ಸಾರಿ ತಂಡಕ್ಕೆ ಆಸರೆಯಾಗಿದ್ದಾರೆ. 116 ಏಕದಿನ ಪಂದ್ಯಗಳಲ್ಲಿ 156 ವಿಕೆಟ್ ಪಡೆದಿದ್ದಾರೆ. 707 ರನ್ ಗಳಿಸಿದ್ದು, 1 ಅರ್ಧ ಶತಕವಿದೆ. 65 ಟಿ-20 ಪಂದ್ಯಗಳನ್ನಾಡಿದ್ದು, 72 ವಿಕೆಟ್ ಪಡೆದಿದ್ದಾರೆ. ಟೆಸ್ಟ್ ನಲ್ಲಿ 37 ಸಾರಿ 5 ವಿಕೆಟ್ ಪಡೆದಿದ್ದಾರೆ. 8 ಸಾವಿರ 10 ಪಡೆದಿದ್ದಾರೆ. 59ಕ್ಕೆ 7 ವಿಕೆಟ್ ಅತ್ಯುತ್ತಮ ಬೌಲಿಂಗ್ ಆಗಿದೆ.
ಟೆಸ್ಟ್ ನಲ್ಲಿ 36 ಕ್ಯಾಚ್, ಏಕದಿನದಲ್ಲಿ 30, ಟಿ-20ನಲ್ಲಿ 11 ಕ್ಯಾಚ್ ಪಡೆದಿದ್ದಾರೆ. 2008ರಿಂದ ಶುರುವಾದ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದರು. 2016ರಲ್ಲಿ ರೈಸಿಂಗ್ ಪುಣೆ ಜಯಂಟ್ಸ್, 2018ರಲ್ಲಿ ಪಂಜಾಬ್, 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್, 2022-24 ರಾಜಸ್ಥಾನ್ ರಾಯಲ್ಸ್ ಹಾಗೂ ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ.