ಪ್ರಜಾಸ್ತ್ರ ಸುದ್ದಿ
ಚೆನ್ನೈ(chennai) ಬಾಂಗ್ಲಾದೇಶದ ವಿರುದ್ಧ 2 ಟೆಸ್ಟ್ ಪಂದ್ಯಗಳ ಸರಣಿ ಇಂದಿನಿಂದ ಶುರುವಾಗಿದೆ. ತಮಿಳುನಾಡಿನ ಚೆನ್ನೈನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದ ಬಾಂಗ್ಲಾ ನಾಯಕ ನಜ್ಮುಲ್ ಹುಸೇನ್ ಸ್ಯಾಂಟೊ ಅವರ ಲೆಕ್ಕಾಚಾರವನ್ನು ಬಾಂಗ್ಲಾ ಬೌಲರ್ ಗಳಲ್ಲಿ ಆರಂಭದಲ್ಲಿ ಸರಿ ಎಂದು ತೋರಿಸಿದರು. ಆದರೆ, ಮುಂದೆ ಅನುಭವಿ ಆಟಗಾರರಾದ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಜೋಡಿ ಗೋಡೆಯಾಗಿ ನಿಂತುಕೊಂಡಿತು. ಹೀಗಾಗಿ ದಿನದಾಟದ ಅಂತ್ಯಕ್ಕೆ 80 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿದೆ.
ಭಾರತ ಪರ ಅಶ್ವಿನ್(Ravichandran Ashwin) ಅಜೇಯ 102 ಹಾಗೂ ಜಡೇಜಾ(Ravindra Jadeja) ಅಜೇಯ 86 ರನ್ ಗಳೊಂದಿಗೆ ಆಟ ಮುಂದುವರೆಸಿದ್ದಾರೆ. ಈ ಶತಕದೊಂದಿಗೆ ಅಶ್ವಿನ್ ಟೆಸ್ಟ್ ನಲ್ಲಿ 5ನೇ ಶತಕ ದಾಖಲಿಸಿದರು. ಯುವ ಆಟಗಾರ ಯಶಸ್ವಿ ಜೈಸ್ವಾಲ್ 56 ರನ್ ಗಳಿಸಿ ಟೆಸ್ಟ್ ನಲ್ಲೂ ಭರವಸೆ ಮೂಡಿಸಿದ್ದಾರೆ. ನಾಯಕ ರೋಹಿತ್ ಶರ್ಮಾ 6, ಗಿಲ್ 0, ಕೊಹ್ಲಿ 6, ರಿಶಿಬ್ ಪಂತ್ 39, ಕೆ.ಎಲ್ ರಾಹುಲ್ 16 ರನ್ ಗಳಿಸಿ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಬಾಂಗ್ಲಾ ಪರ ಹಸನ್ ಮಹಮುದ್ 4 ವಿಕೆಟ್ ಪಡೆದು ಮಿಂಚಿದರು. ನೈದ್ ರಾಣಾ, ಮೆಹಿದ್ಯಾ ಹಸನ್ ಮಿರ್ಜಾ ತಲಾ 1 ವಿಕೆಟ್ ಪಡೆದರು.