ಪ್ರಜಾಸ್ತ್ರ ಸುದ್ದಿ
ಮಂಗಳೂರು(Mangaloru): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಆರ್.ಅಶ್ವಿನ್ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂದಿರುವುದು ಸರಿಯಿದೆ. ಪ್ರಧಾನಿ ಕೂಡ ಇದನ್ನೇ ಹೇಳಿದ್ದು ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಶನಿವಾರ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಶ್ವಿನ್ ಒಂದು ದೃಷ್ಟಿಕೋನದಲ್ಲಿ ಹೇಳಿದ್ದಾರೆ. ಎಲ್ಲ ಭಾಷೆಗಳು ರಾಷ್ಟ್ರೀಯ ಭಾಷೆ. ಪ್ರಧಾನಿ ಮೋದಿ ಕನ್ನಡ, ತಮಿಳಿಗೂ ತುಂಬಾ ಮರ್ಯಾದೆ ಕೊಡುತ್ತಾರೆ.
ಇದೇ ರೀತಿ ಅಶ್ವಿನ್ ಹಿಂದಿ ಮಾತ್ರ ರಾಷ್ಟ್ರೀಯ ಭಾಷೆಯಲ್ಲ. ಎಲ್ಲ ಭಾಷೆಗಳು ರಾಷ್ಟ್ರೀಯ ಭಾಷೆಗಳು ಎನ್ನುವ ಅರ್ಥದಲ್ಲಿ ಹೇಳಿದ್ದಾರೆ. ಹೊರತು ಬೇರೆ ಏನೂ ಇಲ್ಲ. ಇನ್ನು ನಕ್ಸಲರ ಶರಣಾಗತಿ ಹಿಂದೆ ರಾಜಕೀಯ ಮೈಲೇಜ್ ಇದೆ. ಈ ಹಿಂದೆ ನಾನು ಚಿಕ್ಕಮಗಳೂರು ಎಸ್ಪಿ ಆಗಿದ್ದಾಗ ನಕ್ಸಲರ ಶರಣಾಗತಿ ನಡೆದಿದೆ. ನಿಯಮಗಳ ಪ್ರಕಾರ ಜಿಲ್ಲಾಧಿಕಾರಿ, ಎಸ್ಪಿ ಮುಂದೆ ಶರಣಾಗಬೇಕು. ನಂತರ ಬೇರೆ ಪ್ರಕ್ರಿಯೆ. ಆದರೆ ಇಲ್ಲಿ ನಕ್ಸಲ್ ಬೆಂಬಲಿಗರು ಸರ್ಕಾರದ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿದರು.