ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಐಪಿಎಲ್-2024 ಟೂರ್ನಿಯ ಆರಂಭದಲ್ಲಿ ನಟ ದಿ.ಪುನೀತರಾಜಕುಮಾರ್(Appu) ಅವರ ಪತ್ನಿ ಅಶ್ವಿನಿ ಅವರನ್ನು ಆಹ್ವಾನಿಸಲಾಗಿತ್ತು. ಆರ್ ಸಿಬಿ ಸತತ ಸೋಲುಗಳಿಗೆ ಅಶ್ವಿನಿ ಪುನೀತರಾಜಕುಮಾರ್ ಕಾರಣವೆಂದು ಕೆಟ್ಟದಾಗಿ ಕಾಮೆಂಟ್ಸ್ ಮಾಡಲಾಗಿತ್ತು. ಇದು ಸಾಕಷ್ಟು ವೈರಲ್ ಆಗಿ ಅಪ್ಪು ಅಭಿಮಾನಿಗಳು ದೂರು ನೀಡಿದರು. ಈಗ ಮತ್ತೊಂದು ಕೆಟ್ಟ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಲಾಗಿದೆ. ಅಶ್ವಿನಿ ಪುನೀತರಾಜಕುಮಾರ್ ಅವರ ಡೀಪ್ ಫೇಕ್(Deepfake) ವಿಡಿಯೋವೊಂದನ್ನು ಯೋಗೇಂದ್ರ ಪ್ರಸಾದ್ ಎನ್ನುವನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ.
ಅಶ್ವಿನಿ(ashwini puneeth rajkumar) ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿ, ಅಕ್ಟೋಬರ್ 29, 2024ರಂದು ನಾನು ವಿವಾಹ ಆಗಲಿದ್ದೇನೆ. ಅಪ್ಪು ಬಾಸ್ ಅಭಿಮಾನಿಗಳು, ರಾಜವಂಶ ಅಭಿಮಾನಿಗಳು ಎಲ್ಲರೂ ಬಂದು ಆಶೀರ್ವಾದ ಮಾಡಬೇಕು ಎಂದು ನಮ್ಮ ಸವಿನಯ ಆಮಂತ್ರಣ ಎಂದು ಬರೆದಿದ್ದಾನೆ. 11 ಸೆಕೆಂಡಿನ ಡೀಫ್ ಫೇಕ್ ವಿಡಿಯೋದಲ್ಲಿಯೇ ಅದರ ಅಸಲ ಬಣ್ಣ ಬಯಲಾಗಿದೆ. ಅಶ್ವಿನಿ ಪುನೀತರಾಜಕುಮಾರ್ ಅವರ ಎಕ್ಸ್ ಖಾತೆಗೆ ಟ್ಯಾಗ್ ಮಾಡಿದ್ದಾನೆ. ಇತನ ಬಂಧನಕ್ಕೆ ಆಗ್ರಹಿಸಲಾಗಿದೆ. ಬೆಂಗಳೂರು ನಗರ ಪೊಲೀಸರಿಗೆ ಇದನ್ನು ಟ್ಯಾಗ್ ಮಾಡಲಾಗಿದೆ. ಈ ಹಿಂದೆ ನಟಿಯರಾದ ರಶ್ಮಿಕಾ ಮಂದಣ್ಣಾ, ಕತ್ರಿನಾ ಕೈಫ್, ಕಾಜೋಲ್ ಅವರ ಡೀಪ್ ಫೇಕ್ ವಿಡಿಯೋ ಸಹ ಮಾಡಲಾಗಿದೆ.