ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಚಂದನವನದ ಖ್ಯಾತ ನಿರ್ದೇಶಕ, ನಿರ್ಮಾಪಕ, ನಟ ಎ.ಟಿ ರಘು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸಿದೆ ಕೊನೆಯುಸಿರೆಳೆದಿದ್ದಾರೆ. ನಿರ್ದೇಶಕ ಎ.ಟಿ ರಘು ಅವರು ರೆಬಲ್ ಸ್ಟಾರ್ ಅಂಬರೀಶ್ ಗೆ ಬರೋಬ್ಬರಿ 27 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದು, ಬಹುತೇಕ ಸಿನಿಮಾಗಳು ಯಶಸ್ವಿಯಾಗಿವೆ. ಹೀಗಾಗಿ ಇವರದ್ದು ಯಶಸ್ವಿ ಜೋಡಿ ಎನ್ನುತ್ತಿದ್ದಾರೆ. ಮಂಡ್ಯದ ಗಂಡು ಸಿನಿಮಾವನ್ನು ಸಹ ಎ.ಟಿ ರಘು ನಿರ್ದೇಶನ ಮಾಡಿದ್ದು, ಅಂಬಿಗೆ ಇದು ಬಿರುದು ರೀತಿ ಆಗಿ ಹೋಯ್ತು.
ಸುಮಾರು 55 ಸಿನಿಮಾಗಳನ್ನು ಎ.ಟಿ ರಘು ನಿರ್ದೇಶನ ಮಾಡಿದ್ದಾರೆ. 1980ರಿಂದ 98ರ ನಡುವೆ 25ಕ್ಕೂ ಹೆಚ್ಚು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದರು. ಅವಳ ನೆರಳು, ಕಾಡಿನ ರಾಜ, ಅಂತಿಮ ತೀರ್ಪು, ಧರ್ಮಯುದ್ಧ, ಗೂಂಡಾಗುರು, ನ್ಯಾಯ ನೀತಿ ಧರ್ಮ, ದೇವರ ಮನೆ, ಪ್ರೀತಿ, ಪುಟ್ಟ ಹೆಂಡ್ತಿ, ಮೈಸೂರು ಜಾಣ, ಮಿಡಿದ ಹೃದಯಗಳು, ದೇವರ ಮನೆ ಹೀಗೆ 50ಕ್ಕೂ ಹೆಚ್ಚು ಮೂವಿಗಳನ್ನು ನಿರ್ದೇಶಿಸಿದ್ದಾರೆ.