ಪ್ರಜಾಸ್ತ್ರ ಸುದ್ದಿ
ಮೆಲ್ಬೋರ್ನ್(MCG): ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ 4ನೇ ಟೆಸ್ಟ್ ಪಂದ್ಯದಲ್ಲಿಯೂ ಟೀಂ ಇಂಡಿಯಾ ಕಳಪೆ ಆಟ ಮುಂದುವರೆದಿದೆ. ಯಾಕಂದರೆ ಆಸೀಸ್ ಪಡೆ ಮೊದಲ ಇನ್ನಿಂಗ್ಸ್ ನಲ್ಲಿ ಬರೋಬ್ಬರಿ 474 ರನ್ ಗಳಿಸಿ ಬೃಹತ್ ಲೀಡ್ ಕೊಟ್ಟಿದೆ. ಇದನ್ನು ಬೆನ್ನು ಹತ್ತಿರುವ ರೋಹಿತ್ ಶರ್ಮಾ ಪಡೆ ಬಿರುಸಿನ ಆಟದಿಂದ ಹಿಂದೆ ಉಳಿದಿದೆ. ಹೀಗಾಗಿ 2ನೇ ದಿನದ ಆಟದ ಅಂತ್ಯಕ್ಕೆ ಕೇವಲ 164 ರನ್ ಗಳಿಸಿ ಪ್ರಮುಖ 5 ವಿಕೆಟ್ ಕಳೆದುಕೊಂಡಿದೆ. ಇದನ್ನು ನೋಡಿದರೆ ಆಸೀಸ್ ಗೆ ಲೀಡ್ ಕೊಡುವುದು ಇರಲಿ ಈಗಿರುವ 310 ಟ್ರಯಲ್ ರನ್ ಗಳಿಸುವುದು ಕಷ್ಟಸಾಧ್ಯವಿದೆ.
ಯುವ ಆಟಗಾರ ಯಶಸ್ವಿ ಜೈಸ್ವಾಲ್ 82 ರನ್ ಬಿಟ್ಟರೆ ಉಳಿದವರಿಂದ ಪೆವಿಲಿಯನ್ ಪರೇಡ್ ನಡೆಯಿತು. ನಾಯಕ ರೋಹಿತ್ ಶರ್ಮಾ 3, ಕೆ.ಎಲ್ ರಾಹುಲ್ 24, ವಿರಾಟ್ ಕೊಹ್ಲಿ 36, ಆಕಾಶ್ ದೀಪ್ 0 ರನ್ ಗೆ ಔಟ್ ಆದರು. ವಿಕೆಟ್ ಕೀಪರ್ ರಿಷಬ್ ಪಂತ್ 6, ಆಲ್ ರೌಂಡರ್ ಜಡೇಜಾ 4 ರನ್ ಗಳೊಂದಿಗೆ ಕ್ರಿಸ್ ನಲ್ಲಿದ್ದಾರೆ. ಆಸೀಸ್ ಪರ ಕಮಿನ್ಸ್ ಹಾಗೂ ಸ್ಕಾಟ್ ತಲಾ 2 ವಿಕೆಟ್ ಪಡೆದರು.