ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ದೆಹಲಿ ವಿಧಾನಸಭಾ ಚುನಾವಣೆಯಲ್ಲಿ(Election) ಸೋತ ಆಪ್ ಪಕ್ಷ ಎರಡನೇ ಸ್ಥಾನಕ್ಕೆ ಬಂದಿದೆ. ಶನಿವಾರ ಫಲಿತಾಂಶ ಪ್ರಕಟಗೊಂಡಿದ್ದು 27 ವರ್ಷಗಳ ಬಳಿಕ ಬಿಜೆಪಿ(BJP) ಅಧಿಕಾರದ ಗದ್ದುಗೆ ಹಿಡಿದಿದೆ. ಹೀಗಾಗಿ ಭಾನುವಾರ ಮುಖ್ಯಮಂತ್ರಿ ಸ್ಥಾನಕ್ಕೆ ಅತಿಶಿ ಮರ್ಲೇನಾ ರಾಜೀನಾಮೆ ಸಲ್ಲಿಸಿದರು. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಸಕ್ಸೇನಾ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದರು.
70 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ದೆಹಲಿ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳಲ್ಲಿ ಗೆಲುವು ದಾಖಲಿಸಿ ರಾಷ್ಟ್ರ ರಾಜಧಾನಿಯ ಅಧಿಕಾರವನ್ನು ಎರಡೂವರೆ ದಶಕಗಳ ಬಳಿಕ ಹಿಡಿದಿದೆ. ಎರಡು ಬಾರಿ ಗೆದ್ದು ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದ್ದ ಆಪ್(AAP) ಪಕ್ಷ 22ರಲ್ಲಿ ಗೆದ್ದು ಸೋಲಿನೊಂದಿಗೆ 2ನೇ ಸ್ಥಾನಕ್ಕೆ ಬಂದಿದೆ. ಕಾಂಗ್ರೆಸ್(Congress) ಈ ಬಾರಿಯೂ ಖಾತೆ ತೆಗೆಯದೆ ರಾಷ್ಟ್ರೀಯ ಪಕ್ಷವೊಂದರ ಹೀನಾಯ ಸೋಲು ನಾಯಕರ ನಿದ್ದೆಗೆಡಿಸಿದೆ.