Ad imageAd image

ತುಮಕೂರು: ಯುವತಿಯ ರಕ್ಷಣೆಗೆ ಬಂದವರ ಮೇಲೆ ಹಲ್ಲೆ

ನಗರದಲ್ಲಿ ಪುಂಡು ಪೋಕರಿಗಳ ಹಾವಳಿ ಹೆಚ್ಚಾಗಿದೆ. ವಿಲೀಂಗ್ ಮಾಡುತ್ತಿದ್ದ ವೇಳೆ ಯುವತಿಯೊಬ್ಬಳು ಅಡ್ಡ ಬಂದಿದ್ದಾಳೆ.

Nagesh Talawar
ತುಮಕೂರು: ಯುವತಿಯ ರಕ್ಷಣೆಗೆ ಬಂದವರ ಮೇಲೆ ಹಲ್ಲೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ತುಮಕೂರು(Tumakoru): ನಗರದಲ್ಲಿ ಪುಂಡು ಪೋಕರಿಗಳ ಹಾವಳಿ ಹೆಚ್ಚಾಗಿದೆ. ವಿಲೀಂಗ್ ಮಾಡುತ್ತಿದ್ದ ವೇಳೆ ಯುವತಿಯೊಬ್ಬಳು ಅಡ್ಡ ಬಂದಿದ್ದಾಳೆ. ಇಷ್ಟಕ್ಕೆ ಆಕೆಯೊಂದಿಗೆ ಕಿರಾತಕ ಇರ್ಫಾನ್ ಎಂಬಾತ ಜಗಳ ಮಾಡಿದ್ದಾನೆ. ಆಕೆಯನ್ನು ತಳ್ಳಿದ್ದಾನೆ. ಈ ವೇಳೆ ಯುವತಿಯ ರಕ್ಷಣೆಗೆ ಬಂದ ಸಾಧಿಕ್ ಹಾಗೂ ಇರ್ಫಾನ್ ಎನ್ನುವರ ಮೇಲೆಯೇ ಹಲ್ಲೆ(Onset) ಮಾಡಿದ ಘಟನೆ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಇರ್ಫಾನ್ ಹಾಗೂ ಆತನ ತಂಡವನ್ನು ಪೊಲೀಸರು ಪತ್ತೆ ಮಾಡುತ್ತಿದ್ದಾರೆ.

ನಗರದ ಮರಳೂರು ದಿಣ್ಣೆಯಲ್ಲಿ ಆರೋಪಿಗಳು ಬಂದು ಯುವತಿ ಪರ ನಿಂತಿದ್ದ ಇಬ್ಬರ ಮೇಲೆ ತಲ್ವಾರ್, ಚಾಕುವಿನಿಂದ ಕುತ್ತಿಗೆ, ತಲೆ ಹಾಗೂ ಕೈಗೆ ಹಲ್ಲೆ ಮಾಡಿದ್ದಾರೆ. ಇರ್ಫಾನ್ ಎಂಬಾತನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಆತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ದಿನದಿಂದ ದಿನಕ್ಕೆ ವಿಲೀಂಗ್(Bike Wheeling) ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರು ಇಂತಹ ಪುಂಡು ಪೋಕರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ.

WhatsApp Group Join Now
Telegram Group Join Now
Share This Article