ಪ್ರಜಾಸ್ತ್ರ ಸುದ್ದಿ
ನಂಜನಗೂಡು(Nanjangudu): ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಗುವೊಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಆ ಮಗುವನ್ನು ಕುಟುಂಬಸ್ಥರು ಪಡೆಯಲು ಹಣವಿಲ್ಲದೆ, ಭಿಕ್ಷೆ ಬೇಡಿದ ಕರುಣಾಜನಕ ಘಟನೆ ತಾಲೂಕಿನ ಹೆಡೆತಲೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಹೇಶ್ ಹಾಗೂ ರಾಣಿ ಎಂಬುವರು ಐದು ವರ್ಷದ ಮಗು ಆದ್ಯ ಮೃತ ದರ್ದೈವಿ.
ಮಂಗಳವಾರ ಸಂಜೆ ತಾಲೂಕಿನ ಬದನವಾಳು ಗ್ರಾಮದ ಚಾಮರಾಜನಗರ-ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಹತ್ತಿರ ಎರಡು ಬೈಕ್ ಗಳ ನಡುವೆ ಭೀಕರ ಅಪಘಾತ ನಡೆದಿದೆ. ಮಹೇಶ್, ರಾಣಿ ಹಾಗೂ ಇವರ ಮಗಳು ಆದ್ಯ ಗಂಭೀರವಾಗಿ ಗಾಯಗೊಂಡಿದ್ದರು. ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಮತ್ತೊಂದು ಕಡೆ ಹೆತ್ತವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆ ಬಿಲ್ ಒಂದೂವರೆ ಲಕ್ಷವಾಗಿದ್ದು ಅದನ್ನು ಕಟ್ಟಿ ಮಗುವಿನ ಶವ ತೆಗೆದುಕೊಂಡು ಹೋಗಿ ಎಂದಿದ್ದಾರಂತೆ.
ಆಸ್ಪತ್ರೆಯವರ ವರ್ತನೆಯಿಂದ ಕಂಗಾಲಾದ ಮಗುವಿನ ದೊಡ್ಡಮ್ಮ ಮಂಗಳಮ್ಮ ಗ್ರಾಮಕ್ಕೆ ಹೋಗಿ ಮನೆ ಮನೆ ಭಿಕ್ಷೆ ಬೇಡಿದ್ದಾಳೆ. ಪರಿಸ್ಥಿತಿಗೆ ಮರುಗಿದ ಜನರು ಹಣ ನೀಡಿದ್ದಾರೆ. 80 ಸಾವಿರ ರೂಪಾಯಿ ಸಂಗ್ರಹಿಸಿ ಕೊಟ್ಟಿದ್ದಾಳೆ. ಆಸ್ಪತ್ರೆಯವರ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.