ಪ್ರಜಾಸ್ತ್ರ ಸುದ್ದಿ
ಗಬ್ಬಾ(Gabba): ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 3ನೇ ಪಂದ್ಯದಲ್ಲಿ ಭಾರತ ಮತ್ತೆ ಆರಂಭಿಕ ಆಘಾತ ಎದುರಿಸಿದೆ. ಆಸ್ಟ್ರೇಲಿಯಾ 445 ರನ್ ಗಳಿಗೆ ಆಲೌಟ್ ಆಗುವ ಮೂಲಕ ಮೊದಲ ಇನ್ನಿಂಗ್ಸ್ ನಲ್ಲಿ ದೊಡ್ಡ ಮೊತ್ತ ಪೇರಿಸಿದೆ. ಅಲೆಕ್ಸ್ ಕ್ಯಾರಿ 70 ರನ್ ಬಾರಿಸಿ ತಂಡ 400ರ ಗಡಿ ದಾಟುವಂತೆ ಮಾಡಿದರು. ಭಾರತ ಪರ ಬೂಮ್ರಾ 6 ವಿಕೆಟ್ ಪಡೆದು ಮಿಂಚಿದರು. ಸಿರಾಜ್ 2, ಆಕಾಶ್ ದೀಪ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ತಲಾ 1 ವಿಕೆಟ್ ಪಡೆದರು.
ಇನ್ನು ಮೊದಲ ಇನ್ನಿಂಗ್ಸ್ ಆರಂಭಿಸಿರುವ ರೋಹಿತ್ ಶರ್ಮಾ ಬಳಗ ಆರಂಭದಲ್ಲಿಯೇ ಆಘಾತ ಎದುರಿಸಿದೆ. ಮಿಚೆಲ್ ಸ್ಟಾರ್ಕ್ ನ ಮೊದಲ ಓವರ್ ಮೊದಲ ಬೌಲ್ ಫೋರ್ ಹೊಡೆದ ಯುವ ಆಟಗಾರ ಜೈಸ್ವಾಲ್ 2ನೇ ಬೌಲ್ ಗೆ ವಿಕೆಟ್ ಒಪ್ಪಿಸಿದರು. 3ನೇ ಓವರ್ ನ ಮೊದಲ ಬೌಲ್ ನಲ್ಲಿ ಸ್ಟಾರ್ಕ್ ಗೆ ಶುಭನಂ ಗಿಲ್ ಸಹ 1 ರನ್ ಗೆ ವಿಕೆಟ್ ಒಪ್ಪಿಸಿದರು. 7ನೇ ಓವರ್ ನ 2ನೇ ಬೌಲ್ ನಲ್ಲಿ ಹಜಲ್ ವುಡ್ ಗೆ ವಿರಾಟ್ ಕೊಹ್ಲಿ 3 ರನ್ ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಅಲ್ಲಿಗೆ 39 ರನ್ ಗಳಿಗೆ 3 ವಿಕೆಟ್ ಬಿದ್ದಿವೆ. ಕನ್ನಡಿಗ ಕೆ.ಎಲ್ ರಾಹುಲ್ 21, ಪಂತ್ 9 ರನ್ ಗಳೊಂದಿಗೆ ಕ್ರಿಸ್ ನಲ್ಲಿದ್ದು, ಮಳೆಯಿಂದ ಆಟ ಸ್ಥಗಿತಗೊಂಡಿದೆ. ಮಳೆಯಿಂದ ಮೊದಲ ದಿನ ಪಂದ್ಯವೇ ನಿಂತು ಹೋಗಿತ್ತು.