ಪ್ರಜಾಸ್ತ್ರ ಸುದ್ದಿ
ದುಬೈ(Dubai): ಐಸಿಸಿ ಏಕದಿನ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಿವೆ. ಟಾಸ್ ಗೆದ್ದ ಆಸೀಸ್ ನಾಯಕ ಸ್ಟೀವ್ ಸ್ಮಿತ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. 3ನೇ ಓವರ್ ನಲ್ಲಿ ಶೆಮಿ ಕೋಪರ್ ಕನೋಲಿ ವಿಕೆಟ್ ಪಡೆದರು. ಆಗ 4 ರನ್ ಮಾತ್ರ ಆಸ್ಟ್ರೇಲಿಯಾ ಗಳಿಸಿತ್ತು. ಭರ್ಜರಿ ಬ್ಯಾಟ್ ಬೀಸುತ್ತಿದ್ದ ಟ್ರಾವಿಸ್ ಹೆಡ್(39) ನನ್ನು ವರುಣ್ ಚಕ್ರವರ್ತಿ ಪೆವಲಿಯನ್ ಗೆ ಕಳಿಸಿದ.
ಮುಂದೆ ನಾಯಕ ಸ್ಮಿತ್ ತಾಳ್ಮೆಯ ಆಟವಾಡಿದ. ಸ್ಮಿತ್ 73, ಅಲೆಕ್ಸ್ ಕ್ಯಾರಿ 61 ರನ್ ಗಳಿಂದಾಗಿ ಆಸ್ಟ್ರೇಲಿಯಾ 264 ರನ್ ಗಳಿಸಿತು. ಉಳಿದವರು ಹೀಗೆ ಬಂದು ಹಾಗೇ ಹೋದರು. ಇದಕ್ಕೆ ಟೀಂ ಇಂಡಿಯಾದ ಬೌಲರ್ ಗಳ ಮಾರಕ ಬೌಲಿಂಗ್ ಕಾರಣ. ಶೆಮಿ 3, ಜಡೇಜಾ, ಚಕ್ರವರ್ತಿ ತಲಾ 2 ವಿಕೆಟ್ ಪಡೆದು ಸಂಭ್ರಮಿಸಿದರು. ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದರು.