ಪ್ರಜಾಸ್ತ್ರ ಸುದ್ದಿ
ನದೆಹಲಿ(New Delhi): ಭಾರತ ಹಾಗೂ ಆಸ್ಟ್ರೀಲಿಯಾ ಮಹಿಳಾ ತಂಡದ ನಡುವಿನ 3ನೇ ಏಕದಿನ ಪಂದ್ಯ ಅಬ್ಬರದಿಂದ ಕೂಡಿದೆ. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ತಂಡದ ನಾಯಕಿ ಅಲಸ್ಯಾ ಹೆಲ್ಲಿ ಅವರ ನಿರ್ಧಾರವನ್ನು ಆಟಗಾರರು ಸಾಬೀತು ಮಾಡಿದ್ದಾರೆ. 47.5 ಓವರ್ ಗಳಲ್ಲಿ ಬರೋಬ್ಬರಿ 412 ರನ್ ಗಳಿಸಿ ಆಲೌಟ್ ಆಗಿದೆ. ಈ ಮೂಲಕ 28 ವರ್ಷಗಳ ಬಳಿಕ ತನ್ನ ದಾಖಲೆಯನ್ನು ಸರಿಗಟ್ಟಿದೆ.
1997ರಲ್ಲಿ ಡೆನ್ಮಾರ್ಕ್ ವಿರುದ್ಧ 412 ರನ್ ಗಳಿಸಿತ್ತು. ಬೆತ್ ಮೂನಿ 138 ರನ್, ಜೊರಜಿಯಾ ವೊಲ್ 81 ರನ್, ಎಲ್ಸ್ ಪೆರಿ 68 ರನ್ ಬಾರಿಸುವ ಮೂಲಕ ತಂಡದ ಮೊತ್ತ 400ರ ಗಡಿ ದಾಟುವಂತೆ ಮಾಡಿದರು. ಗ್ರೆಡ್ನರ್ 39, ನಾಯಕಿ ಹೆಲ್ಲಿ 30 ರನ್ ಗಳಿಸಿದರು. ಭಾರತ ಪರ ಅರುಂಧತಿ ರೆಡ್ಡಿ 3, ರೇಣುಕಾ ಸಿಂಗ್ 2, ದೇಪ್ತಿ ಶರ್ಮಾ 2, ಕೀರ್ತಿಗೌಡ ಹಾಗೂ ಸ್ನೇಹಾ ರಾಣ ತಲಾ 1 ವಿಕೆಟ್ ಪಡೆದರು.
ಇಷ್ಟೊಂದು ದೊಡ್ಡ ಮಟ್ಟದ ಗುರಿ ಬೆನ್ನುಹತ್ತಿರುವ ಭಾರತ ತಂಡ 23 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 231 ರನ್ ಗಳೊಂದಿಗೆ ಆಡುತ್ತಿದೆ. ಸ್ಮೃತಿ ಮಂದಾನಾ 125 ರನ್ ಗಳೊಂದಿಗೆ ಆಟವಾಡುತ್ತಿದ್ದಾರೆ. ನಾಯಕಿ ಕೌರ್ 52 ರನ್ ಗಳಿಸಿ ಔಟ್ ಆಗಿದ್ದಾರೆ. ಪ್ರತೀಕಾ ರೌಲ್ 10, ಹೆರ್ಲಿನ್ 11 ರನ್ ಗಳಿಸಿ ಔಟ್ ಆಗಿದ್ದಾರೆ. 14 ರನ್ ಗಳೊಂದಿಗೆ ದೀಪ್ತಿ ಶರ್ಮಾ ಮಂದಾನಾಗೆ ಸಾಥ್ ನೀಡಿದ್ದಾರೆ.