Ad imageAd image

ಇಂಡಿಯಾ ವಿರುದ್ಧ 10 ವಿಕೆಟ್ ಅಂತರದಿಂದ ಗೆದ್ದ ಆಸೀಸ್

ಬಾರ್ಡರ್-ಗವಾಸ್ಕರ್ ಟೆಸ್ಟ್ ಟೂರ್ನಿಯ 2ನೇ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋಲು ಕಂಡಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 180 ರನ್ ಗಳಿಗೆ ಆಲೌಟ್ ಆಗಿದ್ದ

Nagesh Talawar
ಇಂಡಿಯಾ ವಿರುದ್ಧ 10 ವಿಕೆಟ್ ಅಂತರದಿಂದ ಗೆದ್ದ ಆಸೀಸ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಓವಲ್(Oval): ಬಾರ್ಡರ್-ಗವಾಸ್ಕರ್ ಟೆಸ್ಟ್ ಟೂರ್ನಿಯ 2ನೇ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋಲು ಕಂಡಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 180 ರನ್ ಗಳಿಗೆ ಆಲೌಟ್ ಆಗಿದ್ದ ರೋಹಿತ್ ಶರ್ಮಾ ಬಳಗ, 2ನೇ ಇನ್ನಿಂಗ್ಸ್ ನಲ್ಲಿ ಮತ್ತೆ ವೈಫಲ್ಯ ಎದುರಿಸಿತು. ಇದರ ಪರಿಣಾಮ 175 ರನ್ ಗಳಿಗೆ ಆಲೌಟ್ ಆಗಿ ಕೇವಲ 19 ರನ್ ಗಳ ಟಾರ್ಗೆಟ್ ನೀಡಿತು. ಪ್ಯಾಟ್ ಕಮಿನ್ಸ್ ಬಳಕ 3.2 ಓವರ್ ಗಳಲ್ಲಿ 19 ರನ್ ಗಳಿಸಿ 10 ವಿಕೆಟ್ ಗಳ ಅಂತರದಿಂದ ಗೆದ್ದು ಬೀಗಿತು. ಅಲ್ಲಿಗೆ 3ನೇ ದಿನದ ಆರಂಭದಲ್ಲಿಯೇ ಪಂದ್ಯ ಮುಗಿಯಿತು.

ಆಸೀಸ್ ನಾಯಕ ಕಮಿನ್ಸ್ ಭರ್ಜರಿ 5 ವಿಕೆಟ್ ಪಡೆದು ಸಂಭ್ರಮಿಸಿದರು. ಸ್ಕಾಟ್ 3, ಮೊದಲ ಇನ್ನಿಂಗ್ಸ್ ನಲ್ಲಿ ಬರೋಬ್ಬರಿ 6 ವಿಕೆಟ್ ಪಡೆದಿದ್ದ ಸ್ಟಾರ್ಕ್ 2 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್ ನಲ್ಲಿ 140 ರನ್ ಗಳಿಸಿದ ಟ್ರಾವಿಸ್ ಹೆಡ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು. 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿವೆ.

WhatsApp Group Join Now
Telegram Group Join Now
Share This Article