ಪ್ರಜಾಸ್ತ್ರ ಸುದ್ದಿ
ಬಳ್ಳಾರಿ(Ballari): ಕಾಂಗ್ರೆಸ್ ಮಾಜಿ ಸಚಿವ, ಶಾಸಕ ಬಿ.ನಾಗೇಂದ್ರ ವಿರುದ್ಧ 18 ಪ್ರಕರಣಗಳಿವೆ ಎಂದು ಶಾಸಕ ಜನಾರ್ಧನ್ ರೆಡ್ಡಿ ಹೇಳಿರುವುದಕ್ಕೆ ತಿರುಗೇಟು ನೀಡಿರುವ ಅವರು, ಜೈಲಿನ ಗೋಡೆಯ ಮೇಲೆ ಬಿಜೆಪಿ ನಾಯಕರ ಹೆಸರು ಬರೆದಿದ್ದೇನೆ. ಅವರೆಲ್ಲರೂ ಜೈಲು ಪಾಲಾಗುತ್ತಾರೆ ನೋಡುತ್ತಾ ಇರಿ ಎನ್ನುವ ಮೂಲಕ ಕಿಡಿ ಕಾರಿದ್ದಾರೆ.
100 ಕೇಸ್ ಗಳು ಇರುವವರ ಮುಖ್ಯಮಂತ್ರಿಯಾಗಿದ್ದಾರೆ. ನನಗೂ ಉತ್ತಮ ಭವಿಷ್ಯವಿದೆ. ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ್ದೇನೆ. ಸಾಮನ್ಯ ಕಾರ್ಯಕರ್ತನಾದ ನನ್ನನ್ನು ಸಚಿವ ಮಾಡಿದ ಪಕ್ಷವಿದು. ನನಗೂ ಸಿಎಂ ಆಗುವ ಅವಕಾಶವಿದೆ ಎಂದು ಗುರುವಾರ ಹೇಳಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬಿ.ನಾಗೇಂದ್ರ ಜಾಮೀನು ಮೇಲೆ ಬುಧವಾರ ಬಿಡುಗಡೆಯಾಗಿದ್ದಾರೆ.
ನಾನು ಯಾವುದೇ ತಪ್ಪು ಮಾಡಿಲ್ಲ. ಇದೆಲ್ಲ ಸುಳ್ಳು ಆರೋಪ. ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ಯಾವುದೇ ಸಣ್ಣ ದೋಷವಿರದೆ ಹೊರ ಬರುತ್ತೇನೆ. ನಾನು ಹಲವು ಬಾರಿ ಜೈಲು ನೋಡಿದ್ದೇನೆ. ನಾನು ಅಕ್ರಮ ಮಾಡಿದ್ದೇನೆ ಎಂದು ಕೆಲವರು ನಂಬಿದ್ದಾರೆ. ಯಾರನ್ನೂ ನಂಬಿಸುವ ಅಗತ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾದ ವೇಳೆ ಅವ್ಯವಹಾರದ ಬಗ್ಗೆ ಹೇಳಿದ್ದೇನೆ. ಹಠಾತ್ ಬಂಧನದ ಬಳಿಕ ಅವರೊಂದಿಗೆ ಮಾತನಾಡಲು ಆಗಲಿಲ್ಲ ಅಂತಾ ಹೇಳಿದರು.