ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaluru): ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಭರ್ಜರಿ ಬ್ಯಾಚುಲರ್ಸ್ ಸೀಸನ್-2ನ ವಿಜಯೇತರಾಗಿ ಗಾಯಕ ಸುನೀಲ್ ಹೊರಹೊಮ್ಮಿದ್ದಾರೆ. ರಕ್ಷಕ್ ಬುಲೆಟ್ ರನ್ನರ್ ಅಪ್ ಆಗಿದ್ದಾರೆ ಎಂದು ಬಲ ಮೂಲಗಳಿಂದ ತಿಳಿದು ಬಂದಿದೆ. ವಿಜಯೇತರ ಫೋಟೋಗಳು ಸಹ ಪ್ರಜಾಸ್ತ್ರ ವೆಬ್ ಪತ್ರಿಕೆಗೆ ಲಭ್ಯವಾಗಿವೆ. ಇಂದು(ಭಾನುವಾರ) ಸಂಜೆ ಜೀ ವಾಹಿನಿಯಲ್ಲಿ ವಿಜಯೇತರು ಯಾರು ಅನ್ನೋದು ಬಹಿರಂಗವಾಗಲಿದೆ.
ಇನ್ನು ಡ್ರೋನ್ ಪ್ರತಾಪ್ 3ನೇ ಸ್ಥಾನ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ರಿಯಾಲಿಟಿ ಶೋನ ಅಂತಿಮ ಸುತ್ತಿನಲ್ಲಿ ಬ್ಯಾಚುಲರ್ಸ್ ಹಾಗೂ ಏಂಜಲ್ಸ್ ಗಳು ತಮ್ಮ ತಮ್ಮ ಆಟವನ್ನು ಆಡಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್, ನಟಿ ರಚಿತಾ ರಾಮ್ ತೀರ್ಪುಗಾರರಾಗಿದ್ದರು. ನಿರಂಜನ್ ದೇಶಪಾಂಡೆ ನಿರೂಪಕರಾಗಿದ್ದಾರೆ. ಸುನೀಲ್-ಅಮೃತಾ, ರಕ್ಷಕ್ ಬುಲೆಟ್-ರಮೋಲಾ, ಗಾಬ್ರಿ-ಅನನ್ಯಾ, ಹುಲಿ ಕಾರ್ತಿಕ್-ಧನ್ಯ, ದರ್ಶನ್-ಅಪೇಕ್ಷಾ, ಪ್ರವೀಣ್ ಜೈನ್-ಸುಕೃತಾ, ಸೂರ್ಯ-ಅಭಿಜ್ಞಾ, ಡ್ರೋನ್ ಪ್ರತಾಪ್-ಗಗನಾ, ಪ್ರೇಮ್ ಥಾಪಾ-ವಿಜಯಲಕ್ಷ್ಮಿ, ಉಲ್ಲಾಸ್-ಪವಿ ಅಂತಿಮ ಸುತ್ತಿನಲ್ಲಿದ್ದರು.