ಪ್ರಜಾಸ್ತ್ರ ಸುದ್ದಿ(Photo ESPNcricinfo)
ಬ್ರಿಸ್ಬನ್: ಐಸಿಸಿ ಚಾಂಪಿಯನ್ಸ್ ಸರಣಿಯಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ಭಾರತೀಯ ಮಹಿಳಾ ಪಡೆ ಸೋಲುವ ಮೂಲಕ ಸರಣಿಯನ್ನು 2-0ದಿಂದ ಕೈ ಚೆಲ್ಲಿದೆ. ಆಸೀಸ್ ತಂಡದ ಇಎ ಪೆರ್ರಿ ಭರ್ಜರಿ 105, ಜಿ ವೊಲ್ 101, ಪಿ.ಲಿಚ್ ಪಿಲ್ಡ್ 60, ಬಿಎಲ್ ಮೊನಿ 56 ರನ್ ಗಳಿಂದಾಗಿ ಬರೋಬ್ಬರಿ 371 ರನ್ ಗಳನ್ನು ಗಳಿಸಿತು. 8 ವಿಕೆಟ್ ಗಳನ್ನು ಕಳೆದುಕೊಂಡ ಆಸ್ಟ್ರೇಲಿಯಾ ಮಹಿಳಾ ಪಡೆ ದೊಡ್ಡ ಮೊತ್ತ ಪೇರಿಸಿತು.
ಭಾರತ ಪರ ಎಸ್.ಝೆಡ್ ಠಾಕೂರ್ 3, ಎಂ.ಮನಿ 2, ರೇಣುಕಾ ಸಿಂಗ್, ಡಿಬಿ ಶರ್ಮಾ ಹಾಗೂ ಪ್ರಿಯಾ ಮಿಶ್ರಾ ತಲಾ 1 ವಿಕೆಟ್ ಪಡೆದಿದ್ದಾರೆ. ಈ ದೊಡ್ಡ ಸ್ಕೋರ್ ಚೇಸ್ ಮಾಡಿದ ತಂಡ 44.5 ಓವರ್ ಗಳಲ್ಲಿ 249 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲು ಕಂಡಿದೆ. ಆರ್.ಎಂ ಘೋಷ್ 54, ಎಂ.ಮನಿ 46, ರೊಡಿಗ್ರಸ್ 43, ನಾಯಕಿ ಕೌರ್ 38 ರನ್ ಬಿಟ್ಟರೆ ಯಾರಿಂದಲೂ ದೊಡ್ಡ ಆಟ ಬರಲಿಲ್ಲ. ಹೀಗಾಗಿ 122 ರನ್ ಗಳ ಅಂತರದಿಂದ ಸೋಲು ಕಂಡಿತು. ಎಲ್ಸ್ ಪೆರ್ರಿ ಮ್ಯಾನ್ ಆಫ್ ದಿ ಮ್ಯಾಚ್ ಆದರು.
ಇವತ್ತಿನ ಭಾನುವಾರ ಭಾರತದ ಕ್ರಿಕೆಟ್ ಪ್ರೇಮಿಗಳಿಗೆ ಬ್ಯಾಡ್ ಭಾನುವಾರವಾಗಿದೆ. ಬಾರ್ಡರ್-ಗವಾಸ್ಕರ್ ಟೂರ್ನಿಯ 2ನೇ ಪಂದ್ಯದಲ್ಲಿ ಪುರುಷರ ತಂಡ ಆಸೀಸ್ ವಿರುದ್ಧ ಸೋತಿದೆ. ಮಹಿಳಾ ತಂಡ ಐಸಿಸಿ ಚಾಂಪಿಯನ್ಸ್ ಟೂರ್ನಿಯಲ್ಲಿ ಆಸೀಸ್ ವಿರುದ್ಧ ಮಹಿಳಾ ತಂಡ ಸೋತಿದೆ. ಇನ್ನೊಂದು ಕಡೆ ಐಸಿಸಿ ಅಂಡರ್ 19 ಚಾಂಪಿಯನ್ಸ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾ ತಂಡದ ಎದುರು ಭಾರತೀಯ ಯವ ಪಡೆ ಸೋತಿದೆ. ಹೀಗಾಗಿ ಈ ದಿನ ಕ್ರಿಕೆಟ್ ಪ್ರೇಮಿಗಳಿಗೆ ತುಂಬಾ ನಿರಾಸೆಯಾಗಿದೆ.