ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಬಿಜೆಪಿ ಎಂಎಲ್ಸಿ ಸಿ.ಟಿ ರವಿ ನಡುವೆ ಫೈಟ್ ನಡೆಯುತ್ತಿದೆ. ಈ ಬಗ್ಗೆ ಕಲಬುರಗಿಯ ಏರ್ ಪೋರ್ಟ್ ನಲ್ಲಿ ಮಾತನಾಡಿದ ಸಿ.ಟಿ ರವಿ, ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ. ಸರ್ವಾಧಿಕರಿ ದೋರಣೆ ಕೊನೆಯಾಗಲಿದೆ. ಕರ್ನಾಟಕವನ್ನು ಗೂಂಡಾ ರಿಪಬ್ಲಿಕ್ ಮಾಡಲು ಬಿಡುವುದಿಲ್ಲ ಎಂದು ಹೇಳಿದರು. ಕೋರ್ಟ್ ಮೇಲೆ ನಂಬಿಕೆಯಿದೆ. ಸತ್ಯಮೇವ ಜಯತೆ ಎಂದರು.
ಅತ್ತೆಗೊಂದು ಕಾಲ ಸೊಸೆಗೊಂದು ಕಾಲ. ನಮಗೂ ಒಂದು ಕಾಲ ಬರುತ್ತೆ. ರಾಜ್ಯದ ತುಘಲಕ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ ನನ್ನ ಕಾರ್ಯಕರ್ತರು, ನನಗೆ ಬೆಂಬಲ ನೀಡಿದ ಜನರಿಂದ ಶಕ್ತಿ ತುಂಬಿದಂತಾಗಿದೆ. ನಮ್ಮ ಪಕ್ಷದ ಶಾಸಕರಿಗೆ, ಪರಿಷತ್ ಸದಸ್ಯರು, ಮಾಜಿ ಸಚಿವರಿಗೆ ಧನ್ಯವಾದಗಳು ಎಂದರು.