ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತಬೇಟೆ ಕೊನೆಯ ಹಂತಕ್ಕೆ ಬಂದಿದೆ. ಈಗಾಗ್ಲೇ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಇವತ್ತು ಒಂದು ದಿನ ಮತದಾರರ ಮನವೊಲಿಸಲು ಉಳದಿದೆ. ಏಪ್ರಿಲ್ 9 ಗುರುವಾರ ಮತದಾನ ನಡೆಯಲಿದೆ.
ಇದೀಗ ತೆರೆಮರೆಯ ರಾಜಕೀಯ ಕಸರತ್ತುಗಳು ನಡೆಯುತ್ತಿವೆ. ಬಾಗಲಕೋಟೆಯಲ್ಲಿ ಬಿಜೆಪಿ ಹಿಂದುತ್ವದ ದಾಳ ಉರುಳಿಸಿದೆ. ಕಾಂಗ್ರೆಸ್ ಅನುಕಂಪದ ಪದ್ಧತಿ ಮುಂದುವರೆಸಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಹಿಂದುಳಿದ ವರ್ಗದ ಪ್ರಯೋಗ ಮಾಡಿದೆ. ಶ್ರೀನಿವಾಸ ದಾಸಕರಿಯಪ್ಪ ಅವರಿಗೆ ಟಿಕೆಟ್ ಕೊಟ್ಟಿದೆ. ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದೆ. ಎರಡು ಕಡೆ ಆಡಳಿತ ವಿರೋಧಿ ಅಲೆ ಕಂಡು ಬರುತ್ತಿದ್ದರೂ, ಮತದಾರರ ಮನಸ್ಸಿನಲ್ಲಿ ಏನಿದೆ ಅನ್ನೋದು ನಿಗೂಢ.
ಬಾಗಲಕೋಟೆಯಲ್ಲಿ ಒಮ್ಮೆ ಹೆಚ್.ವೈ ಮೇಟಿ ಗೆಲುವು ಸಾಧಿಸಿದೆ. ಒಮ್ಮೆ ಚರಂತಿಮಠ ವಿಜಯ ಸಾಧಿಸಿದ್ದಾರೆ. ಹೀಗೆ ಒಬ್ಬರಾದ ಮೇಲೆ ಒಬ್ಬರಿಗೆ ಮತದಾರ ಅವಕಾಶ ಕೊಡುತ್ತಾ ಬಂದಿದ್ದಾನೆ. ಉಪ ಚುನಾವಣೆಯಲ್ಲಿಯೂ ಇದೆ ಆಗುತ್ತಾ ನೋಡಬೇಕು. ಇನ್ನು ದಾವಣಗೆರೆ ಕ್ಷೇತ್ರ ವಿಭಜನೆ ಆದ ಬಳಿಕ 2008ರಿಂದ 2023ರ ತನಕ ಕಾಂಗ್ರೆಸ್ ನಿಂದ ಶಾಮನೂರು ಶಿವಶಂಕರಪ್ಪ ಗೆಲ್ಲುತ್ತಾ ಬಂದಿದ್ದಾರೆ. ಆದ್ರೆ, ಈ ಬಾರಿ ಮುಸ್ಲಿಂ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ಇಲ್ಲಿ ಅವರಿಗೆ ಟಿಕೆಟ್ ನೀಡುವ ಬದಲು ಶಿವಶಂಕರಪ್ಪನವರ ಮೊಮ್ಮಗನಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಜನರು ಯಾರ ಕೈ ಹಿಡಿಯುತ್ತಾರೆ ಅನ್ನೋ ಪ್ರಶ್ನೆ ಇದೆ.




