ಪ್ರಜಾಸ್ತ್ರ ಸುದ್ದಿ
ಬಾಗಲಕೋಟೆ(Bagalakote): ಜಿಲ್ಲೆಯ ಜಮಖಂಡಿ ಹಿಪ್ಪರಗಿ ಗ್ರಾಮದ ಅಥಣಿ ಹಿಪ್ಪರಗಿ ಆಣೆಕಟ್ಟು ಮೊದಲ ಕ್ರೆಸ್ಟ್ ಗೇಟಿಗೆ ಹಾನಿಯಾದ ಹಿನ್ನಲೆಯಲ್ಲಿ ಅಪಾರ ಪ್ರಮಾಣದಲ್ಲಿ ಹಿನ್ನೀರು ಹರಿದು ಹೋಗುತ್ತಿದೆ. 22ನೇ ಗೇಟ್ ನೀರಿನ ಒತ್ತಡದಿಂದ ಮುರಿದು ಹಾನಿಗೊಳಗಾಗಿದೆ. ಬ್ಯಾರೇಜ್‌ನ ಗೇಟ್‌ನ ಪ್ಲೇಟ್ ಬಿಚ್ಚಿ ಹೋಗಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.
ಬ್ಯಾರೇಜ್‌ನಲ್ಲಿನ ನಿಂತ ನೀರು ಪೋಲಾಗಿರುವುದರಿಂದ ನೀರಿನ ಒತ್ತಡ ಕಡಿಮೆ ಇರುವ ಕಾರಣ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಗೇಟ್‌ನ ಪ್ಲೇಟ್ ಯಾವ ಕಾರಣಕ್ಕೆ ಮುರಿದಿದೆ ಎಂಬುದು ಇನ್ನೂ ಕಾರಣ ತಿಳಿದು ಬಂದಿಲ್ಲ. ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಆದಷ್ಟು ಬೇಗನೆ ಬಗೆಹರಿಸುವ ನಿರೀಕ್ಷೆಯಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ ತಿಮ್ಮಾಪುರ ಜಲಾಶಯಕ್ಕೆ ಭೇಟಿ ನೀಡಿದ ವೇಳೆ ಹೇಳಿದ್ದಾರೆ.
ಹಿಪ್ಪರಗಿ ಜಲಾಶಯಕ್ಕೆ ಜಿಲ್ಲಾಧಿಕಾರಿ ಸಂಗಪ್ಪ, ತಹಶೀಲ್ದಾರ್ ಅನೀಲ ಬಡಗೇರ, ಜಮಖಂಡಿ ಎಸಿ ಶ್ವೇತಾ ಬೀಡಿಕರ್, ರಬಕವಿ ಬನಹಟ್ಟಿ ತಹಶೀಲ್ದಾರ್ ಗಿರೀಶ್ ಸ್ಥಳಕ್ಕೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.




