ಪ್ರಜಾಸ್ತ್ರ ಸುದ್ದಿ
ಮಂಡ್ಯ(Mandaya): ಜಿಲ್ಲೆಯ ನಾಗಮಂಗಲ(Nagamangala) ಪಟ್ಟಣದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಾಭೆ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಎಲ್ಲ 55 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ. ಮಂಡ್ಯ 1ನೇ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್, 1 ಲಕ್ಷ ರೂಪಾಯಿ ಬಾಂಡ್, ಡಬಲ್ ಶ್ಯೂರಿಟಿ ಷರತ್ತು ವಿಧೀಸಿ ಜಾಮೀನು ನೀಡಿದೆ. ಇಂದು, ನಾಳೆ ರಜೆ ಇರುವುದರಿಂದ ಸೋಮವಾರ ಬಿಡುಗಡೆಯಾಗುವ ಸಾಧ್ಯತೆಯಿದೆ.
ಕಳೆದ ಸೆಪ್ಟೆಂಬರ್ 11ರಂದು ನಾಗಮಂಗಲ ಪಟ್ಟಣದಲ್ಲಿ ಹಿಂದೂ-ಮುಸ್ಲಿಂರ(Hindu-Muslim) ನಡುವೆ ಗಲಾಟೆ ನಡೆದಿತ್ತು. ಇದರಿಂದಾಗಿ ಅಪಾರ ಪ್ರಮಾಣ ಆಸ್ತಿ, ಪಾಸ್ತಿ ಹಾನಿಯಾಗಿತ್ತು. ನಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಘಟನೆ ಸಂಬಂಧ 18 ಹಿಂದೂ ಸಮುದಾಯದ ಹಾಗೂ 37 ಮುಸ್ಲಿಂ ಸಮುದಾಯದ ಆರೋಪಿಗಳನ್ನು ಬಂಧಿಸಿದ್ದರು. ಈ ಕೋಮು ಗಲಭೆ ರಾಜಕೀಯ ಸ್ವರೂಪ ಸಹ ಪಡೆದುಕೊಂಡಿತ್ತು. ಇದೀಗ ಇವರೆಲ್ಲರಿಗೂ ಜಾಮೀನು ಸಿಕ್ಕಿದೆ.